ಉದ್ಯೋಗ, ಆದಾಯ, ಘನತೆ - ನಾವು ಮಾನವ ಅಭಿವೃದ್ಧಿ ಮತ್ತು ಕಲ್ಯಾಣಕ್ಕೆ ಸಂಬಂಧಿಸಿದ ಈ ಬಿಂದುಗಳನ್ನು ಜೋಡಿಸಲು ಪ್ರಯತ್ನಿಸಯತ್ತೇವೆ
ಹೆಚ್ಚಿನ ಹಾಗೂ ಸುಸ್ಥಿರ ಆದಾಯವು ಪ್ರತಿಯೊಂದು ಕುಟುಂಬದ ಜೀವನವನ್ನು ಉತ್ತಮಪಡಿಸುತ್ತದೆ. ಇದನ್ನು ಸಾಧಿಸಲು ನಾವು ಜನರು ಹಾಗೂ ಸಮುದಾಯಗಳಿಗೆ ನೆರವು ನೀಡುತ್ತೇವೆ. ಸಾಂಪ್ರದಾಯಿಕ ಜೀವನೋಪಾಯ ಮಾರ್ಗಗಳಿಗೆ ಮೌಲ್ಯವರ್ಧನೆಯನ್ನು ಉತ್ತೇಜಿಸುವುದು, ಸರ್ಕಾರಿ ಕಾನೂನುಗಳ ಅಡಿಯಲ್ಲಿ ಬರುವ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ಮುಂತಾದ ಆದಾಯ ಸೃಷ್ಟಿಸುವ ಮುಖ್ಯ ಅಂಶಗಳ ಮೇಲೆ ನಮ್ಮ ತಂಡಗಳು ಗಮನ ಹರಿಸುತ್ತವೆ.
ನಾವು ಸಾಮುದಾಯಿಕ ಸಂಸ್ಥೆಗಳನ್ನು ಬಲಪಡಿಸಲೂ ಸಹ ನೆರವು ನೀಡುತ್ತೇವೆ (ಉದಾಹರಣೆಗೆ, ಸ್ವಸಹಾಯ ಗುಂಪುಗಳಂತಹ ಸಂಸ್ಥೆಗಳು) ಹಾಗೂ ಸಣ್ಣ ಪ್ರಮಾಣದ ಜಾನುವಾರು ಸಾಕಣೆಯ ಅಭಿವೃದ್ಧಿ ಹಾಗೂ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಗಳಿಗೆ (ಮಳೆ ನೀರಿನ ಕೊಯ್ಲಿಗಾಗಿ ನಿರ್ಮಿಸಿಕೊಳ್ಳುವ ರಚನೆಗಳಂತಹವುಗಳು) ಸಮುದಾಯಗಳಿಗೆ ಬೆಂಬಲ ನೀಡುತ್ತೇವೆ.

ನಮ್ಮ ಮಧ್ಯಪ್ರವೇಶಗಳನ್ನು ಸ್ಥೂಲವಾಗಿ ಮೂರು ಹಂತಗಳಾಗಿ ವಿಭಜಿಸಬಹುದು: ಮೊದಲನೆಯದು ಕುಟುಂಬದ ಮಟ್ಟದ್ದು ಹಾಗೂ ಅತ್ಯಂತ ಮೂಲಭೂತವಾದ ಘಟಕ. ಎರಡನೆಯದು, ಗುಂಪಿನ/ಕ್ಲಸ್ಟರ್ ಮಟ್ಟದ್ದು, ಇದು ಐದರಿಂದ ಆರು ಗ್ರಾಮ ಪಂಚಾಯತಿಗಳ ಗುಂಪು ಅಥವಾ ಸಾಮಾನ್ಯವಾಗಿ, ಸುಮಾರು 2000 ಕುಟುಂಬಗಳಿರುವಂತಹ 20 ಹಳ್ಳಿಗಳ ಗುಂಪಿನ ಮಟ್ಟದ್ದು. ಮೂರನೆಯ ಹಾಗೂ ಕೊನೆಯ ಹಂತವೆಂದರೆ, ಅದು ಒಂದು ಪ್ರದೇಶ ಅಥವಾ ಕ್ಲಸ್ಟರ್ಗಳ ಸಮೂಹ, ಜಿಲ್ಲೆ, ರಾಜ್ಯ ಅಥವಾ ಒಂದು ಇಡೀ ಪ್ರದೇಶದ ಮಟ್ಟದ್ದು.
ನಮ್ಮ ಮಧ್ಯಪ್ರವೇಶಗಳನ್ನು ಸುರಕ್ಷತೆ, ಘನತೆ ಹಾಗೂ ಸಮೃದ್ಧತೆ ಎನ್ನುವ ಮೂರು ಮಾರ್ಗದರ್ಶಿ ಸೂತ್ರಗಳ ಕೆಳಗೆ ವಿಂಗಡಿಸಬಹುದಾಗಿದೆ. ನ್ಯಾಯಯುತವಾಗಿ ದೊರೆಯಬೇಕಿರುವ ಸೌಲಭ್ಯಗಳು ಹಾಗೂ ಸಾಂಪ್ರದಾಯಿಕ ಜೀವನೋಪಾಯ ಚಟುವಟಿಕೆಗಳಿಂದ ಬರುವ ಆದಾಯಗಳು ಸುಲಭವಾಗಿ ಸಿಗುವಂತೆ ಮಾಡುವಂತಹ ಕುಟುಂಬದ ಮಟ್ಟದ ಮಧ್ಯಪ್ರವೇಶಗಳಿಂದ ಸುರಕ್ಷತೆಯಡೆಗೆ ಸಾಗಬಹುದು. ಉತ್ತಮ ಮಾರುಕಟ್ಟೆ ಸಂಪರ್ಕಗಳು, ಬೆಲೆಗಳು, ಸಾಮೂಹಿಕ ಕಾರ್ಯಗಳ ಮೂಲಕ ಸಾಲ ಪಡೆದುಕೊಳ್ಳುವುದು ಹಾಗೂ ಉತ್ಪನ್ನಗಳ ಮೌಲ್ಯ ಹೆಚ್ಚಿಸುವುದು ಮುಂತಾದ ಕ್ಲಸ್ಟರ್ ಮಟ್ಟದ ಮಧ್ಯಪ್ರವೇಶಗಳಿಂದ ಘನತೆಯೆಡೆಗೆ ಸಾಗಬಹುದು. ಬೃಹತ್ ಮಟ್ಟದ ಅಣಿನೆರೆಸುವುದು (ಸಂಸ್ಕರಣೆ) /ಉತ್ಪಾದನಾ ಕೈಗಾರಿಕೆ ಮುಂತಾದ ಪ್ರಾದೇಶಿಕ ಮಟ್ಟದ ಮಧ್ಯಪ್ರವೇಶಗಳಿಂದ ಸಮೃದ್ಧತೆಯ ಕಡೆ ಸಾಗಬಹುದು.
ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಂತೆ, ಜೀವನೋಪಾಯ ನಿರ್ವಹಣೆಯ ಕ್ಷೇತ್ರದ ನಮ್ಮ ಕೆಲಸವೂ, ಭಾರತದ ಅತ್ಯಂತ ದುರ್ಬಲ ಮತ್ತು ಅಂಚಿಗೆ ತಳ್ಳಲ್ಪಟ್ಟ ಜನರಿಗೆ ಒತ್ತಾಸೆ ನೀಡುವ ಉದ್ದೇಶವನ್ನು ಹೊಂದಿದೆ. ಜೀವನೋಪಾಯ ನಿರ್ವಹಣೆ ಕ್ಷೇತ್ರದ ಕೆಲಸವನ್ನು ನಾವು ದೇಶದ ಮಧ್ಯಭಾಗದಲ್ಲಿರುವ ಆದಿವಾಸಿ ವಲಯವಾದ ಛತ್ತೀಸ್ಗಡ್ ರಾಜ್ಯದ ರಾಯ್ಘರ್ ಜಿಲ್ಲೆ ಮತ್ತು ಜಾರ್ಖಂಡ್ ರಾಜ್ಯದ ಗುಮ್ಲಾ ಜಿಲ್ಲೆಯಲ್ಲಿ ಪ್ರಾರಂಭಿಸಿದೆವು.
ಜೀವನೋಪಾಯ ನಿರ್ವಹಣೆ ಕ್ಷೇತ್ರದಲ್ಲಿ ನಾವು, ನಮ್ಮ ಕ್ಷೇತ್ರ ಸಂಸ್ಥೆಗಳು ಮತ್ತು ಸಹವರ್ತಿಗಳ ಮೂಲಕ ನೇರವಾಗಿ ತಳಸ್ತರದಲ್ಲಿ ಕೆಲಸ ಮಾಡುತ್ತೇವೆ.