ನಮ್ಮ ಕೆಲಸದ ಪ್ರಾಥಮಿಕ ಗುರಿ ಸರ್ಕಾರಿ ಶಾಲೆಗಳ ಶಿಕ್ಷಕರು ಪರಿಣಾಮಕಾರಿ ಬೋಧನೆಗೆ ಅನುವಾಗುವಂತೆ ಅವರಿಗೆ ಬೆಂಬಲವನ್ನು ನೀಡುವುದಾಗಿದೆ
ನಮ್ಮ ಪ್ರಯತ್ನವು ವಿಷಯವಸ್ತು, ಭೋಧನಾ ವಿಧಾನ ಮತ್ತು ದೃಷ್ಟಿಕೋನದಲ್ಲಿ ಅವರ ಸಾಮರ್ಥ್ಯವನ್ನು ರೂಪಿಸುವುದಕ್ಕಾಗಿ ನಡೆಯುತ್ತಿದೆ.
ನಾವು ಕೆಲಸ ಮಾಡುತ್ತಿರುವ ಜಿಲ್ಲೆಗಳ ಪ್ರಮುಖ ಪಟ್ಟಣಗಳಲ್ಲಿ ನಾವು ಸ್ಥಾಪಿಸಿರುವ ಶಿಕ್ಷಕ ಕಲಿಕಾ ಕೇಂದ್ರಗಳಲ್ಲಿ (ಟಿ.ಎಲ್.ಸಿ ಗಳು) ಶಿಕ್ಷಕರೊಂದಿಗೆ ಪರಸ್ಪರ ಸಂವಹನವನ್ನು ನಡೆಸುತ್ತೇವೆ. ಸರ್ಕಾರಿ ಶಾಲೆಗಳಲ್ಲಿ ಅಥವಾ ಖಾಸಗಿ ಸ್ಥಳಗಳಲ್ಲಿರುವ ಈ ಟಿ.ಎಲ್.ಸಿ ಗಳು, ಕಾರ್ಯಾಗಾರಗಳು, ಚರ್ಚೆ, ಸ್ವಯಂಪ್ರೇರಿತ ಶಿಕ್ಷಕ ಚರ್ಚೆಗಳು, ಮೇಳಗಳು ಹಾಗೂ ಅನುಭವ ಹಂಚಿಕೆ ಕಾರ್ಯಕ್ರಮ ಇತ್ಯಾದಿ ವಿವಿಧ ಶೈಕ್ಷಣಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಶಿಕ್ಷಕರಿಗೆ ಸ್ಥಳಾವಕಾಶಳವನ್ನು ಒದಗಿಸುತ್ತವೆ.
ಈ ಟಿ.ಎಲ್.ಸಿ ಗಳಲ್ಲಿ, ಪುಸ್ತಕಗಳು, ನಿಯತಕಾಲಿಕಗಳು, ಪಠ್ಯಪುಸ್ತಕಗಳು, ಸುದ್ದಿಪತ್ರಿಕೆಗಳು, ಕಲಿಕಾ ಸಂಪನ್ಮೂಲಗಳು, ವಿಜ್ಞಾನ ಪ್ರಯೋಗಾಲಯದ ಪರಿಕರಗಳು, ಇಂಟರ್ನೆಟ್ ಸಂಪರ್ಕದೊಂದಿಗೆ ಕಂಪ್ಯೂಟರ್ಗಳು ಮತ್ತು ಬೋಧನೆ-ಕಲಿಕೆ ಸಾಮಗ್ರಿ ಇತ್ಯಾದಿಗಳ ವಿಸ್ತೃತ ಮತ್ತು ಉತ್ತಮ ಸಂಗ್ರಹವನ್ನು ಹೊಂದಿರುವ ಗ್ರಂಥಾಲಯಗಳನ್ನು ಕಾಣಬಹುದು.

ಶಿಕ್ಷಕರು, ಮುಖ್ಯ ಶಿಕ್ಷಕರು ಮತ್ತು ಶೈಕ್ಷಣಿಕ ಕ್ಷೇತ್ರದ ಅಧಿಕಾರಿ ವರ್ಗದವರೊಂದಿಗೆ ನಿರಂತರವಾಗಿ ತೊಡಗಿಸಿಕೊಳ್ಳುವುದು, ಹಾಗೂ ತಳಮಟ್ಟದಲ್ಲಿ ನಮ್ಮ ಕೆಲಸಗಳಾದ ಶಾಲಾ ಪಠ್ಯಕ್ರಮ, ಪಠ್ಯಪುಸ್ತಕದ ಅಭಿವೃದ್ಧಿ, ಕಲಿಕಾ ಸಾಮಗ್ರಿಗಳು ಮತ್ತು ಸೇವಾನಿರತ ಶಿಕ್ಷಕರ ತರಬೇತಿಗಾಗಿ ರಾಜ್ಯ ಮಟ್ಟದಲ್ಲಿ ಮಾಡ್ಯುಲ್ಗಳನ್ನು ಅಭಿವೃದ್ಧಿಪಡಿಸುವುದು ಸೇರಿದಂತೆ ಇತರ ಕೆಲಸಗಳು ನಮ್ಮ ಪ್ರಮುಖ ಉದ್ದೇಶದ ಭಾಗವಾಗಿದೆ ಶಾಲಾ ಪರಿಸರದ ದೈನಂದಿನ ಆಚರಣೆಯಲ್ಲಿ ಬದಲಾವಣೆ ತರುವುದಕ್ಕಾಗಿ ನಾವು ಮುಖ್ಯ ಶಿಕ್ಷಕರ ಜತೆಗೂಡಿ ಕೆಲಸ ಮಾಡುತ್ತಿದ್ದೇವೆ: ಬೆಳಗಿನ ಸಭೆಗಳನ್ನು ನಡೆಸುವುದು, ವಾಚನಾಲಯಗಳಲ್ಲಿ ಓದುವ ಮೂಲೆಗಳನ್ನು ರಚಿಸುವುದು, ಮತ್ತು ಕ್ರೀಡೆಯನ್ನು ಸೇರಿಸಿಕೊಳ್ಳುವುದು ಇತ್ಯಾದಿ.
ಅಲ್ಲದೆ ಶಿಕ್ಷಣ ಇಲಾಖೆಯ ಅಧಿಕಾರಿಗಳಲ್ಲಿ ಜಂಟಿ ನಿರ್ದೇಶಕರು, ಎಸ್.ಸಿ.ಇ.ಆರ್.ಟಿ/ಡಯಟ್ ಬೋಧನಾ ಸಿಬ್ಬಂದಿ ಹಾಗೂ ಇತರರಲ್ಲಿ ಬೋಧನಾ ವಿಧಾನ ದೃಷ್ಟಿಕೋನ, ನೀತಿ ಮತ್ತು ಸಂಶೋಧನೆಗೆ ಒತ್ತು ನೀಡುತ್ತಾ, ಅವರ ಕ್ರಿಯಾ ಸಾಮರ್ಥ್ಯವನ್ನು ವೃದ್ಧಿಸಲು ಯತ್ನಿಸುತ್ತಿದ್ದೇವೆ.
ಶಿಕ್ಷಕರೊಂದಿಗೆ ನಾವು ನೇರ ಮತ್ತು ನಿರಂತರ ಕೆಲಸದ ಇನ್ನೊಂದು ಪ್ರಮುಖ ಪ್ರದೇಶವಾಗಿರುವ ಆರಂಭಿಕ ಬಾಲ್ಯ ಶಿಕ್ಷಣ (ECE) ನಲ್ಲಿ ಕೆಲಸಮಾಡುತ್ತಿದ್ದೇವೆ.
ಫೌಂಡೇಷನ್, 2012ರಲ್ಲಿ ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ತನ್ನ ಆರಂಭಿಕ ಬಾಲ್ಯ ಶಿಕ್ಷಣದಕ್ಕೆ (ಇ.ಸಿ.ಇ) ಉಪಕ್ರಮಕ್ಕೆ ಚಾಲನೆ ನೀಡಿತು. ಆರಂಭದಲ್ಲಿ ಇ.ಸಿ.ಇ ಕಾರ್ಯಕ್ರಮವು ಭಾರತ ಸರ್ಕಾರದ ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ (ಐ.ಸಿ.ಡಿ.ಎಸ್) ಅಡಿಯಲ್ಲಿ ಅಂಗನವಾಡಿ ಶಿಕ್ಷಕರ ಸಾಮರ್ಥ್ಯ ವೃದ್ಧಿ, ಹಾಗೂ ಉತ್ತಮ ಗುಣಮಟ್ಟದ ಆರಂಭಿಕ ಬಾಲ್ಯ ಶಿಕ್ಷಣವನ್ನು -(3ರಿಂದ 6 ವರ್ಷ ವಯಸ್ಸಿನ ಮಕ್ಕಳಿಗಾಗಿ-) ನೀಡುವುದಕ್ಕಾಗಿ ಅವರಿಗೆ ಸಹಾಯ ಮಾಡುವ ಕೆಲಸಕ್ಕೆ ಒತ್ತು ನೀಡಿತು.

ಇ.ಸಿ.ಇ ಪಠ್ಯಕ್ರಮವು ಮಗುವಿನ ಸಮಗ್ರ ಬೆಳವಣಿಗೆಯ ತತ್ವವನ್ನು ಆಧರಿಸಿದ್ದು, ಅವರ ಬದುಕಿಗೆ ನಿಕಟವಾದ ಆಸಕ್ತಿಗಳು ಮತ್ತು ವಿಷಯವಸ್ತುಗಳಿಗೆ ಇದು ಗಮನ ನೀಡುತ್ತದೆ. ಪಠ್ಯಕ್ರಮವನ್ನು ಆಂತರಿಕವಾಗಿಯೇ ಸಿದ್ಧಪಡಿಸಿ ಅಂಗನವಾಡಿ ಕೇಂದ್ರಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
ಸಂಗರೆಡ್ಡಿಯಲ್ಲಿ ದೊರೆತ ಅನುಭವವು, ಈ ಕೆಲಸವನ್ನು ನಾವು ಕಾರ್ಯ ನಿರ್ವಹಿಸುತ್ತಿರುವ ರಾಜ್ಯಗಳಿಗೆಳು ಮತ್ತು ಜಿಲ್ಲೆಗಳಿಗೆ ವಿಸ್ತರಿಸಲು ಪ್ರೇರಣೆ ನೀಡಿತು.
ನಾವು ಇ.ಸಿ.ಇ ಯಲ್ಲಿ ಗಣನೀಯ ಪ್ರಮಾಣದ ಪಠ್ಯಕ್ರಮ ಕಾರ್ಯವನ್ನು ಪೂರ್ಣಗೊಳಿಸಿದ್ದು, 3-5 ವರ್ಷ ವಯಸ್ಸಿನ ಮಕ್ಕಳಿಗಾಗಿ ಬೆಳವಣಿಗೆಯ ಮೌಲ್ಯಾಂಕನ ಕೈಪಿಡಿಯಾಗಿರುವ ಆರಂಭಿಕ ಕಲಿಕೆ ಮೌಲ್ಯಾಂಕನ (ಇ.ಎಲ್.ಎ) ವನ್ನು ಅಭಿವೃದ್ಧಿಪಡಿಸಿದ್ದೇವೆ.