ದಿವ್ಯಾಂಗತೆ

Disability

ದೈಹಿಕ, ಸಂವೇದನಾತ್ಮಕ/ಐಂದ್ರಿಯಕ, ವಿಕಸನಾತ್ಮಕ ಮತ್ತು ಬೌದ್ಧಿಕ, ಹೀಗೆ ವಿವಿಧ ದಿವ್ಯಾಂಗತೆಗಳ ವಿಷಯದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಗಳನ್ನು ನಾವು ಬೆಂಬಲಿಸುತ್ತೇವೆ

ವಕ್ರಪಾದ ಮತ್ತು ತಡೆಗಟ್ಟಬಹುದಾದ ಕುರುಡುತನದಂತಹ ದಿವ್ಯಾಂಗತೆಗಳನ್ನು ಹೊಂದಿರುವ ಜನರೊಂದಿಗೆ ಕೆಲಸ ಮಾಡುವ ಸಂಸ್ಥೆಗಳನ್ನು ಸಹ ನಾವು ಬೆಂಬಲಿಸುತ್ತೇವೆ.

ಪ್ರಸ್ತುತ, ನಮ್ಮ ಅನುದಾನಗಳ ಮೂಲಕ, ವಿವಿಧ ವಯೋಮಾನ ಗುಂಪುಗಳಿಗೆ ಸೇರಿದ ಕೆಲವು ಅತ್ಯಂತ ದುರ್ಬಲ ಹಿನ್ನೆಲೆಯ ಜನರೊಂದಿಗೆ ಕೆಲಸ ಮಾಡುವ 70ಕ್ಕೂ ಹೆಚ್ಚು ಸಂಸ್ಥೆಗಳೊಂದಿಗೆ ನಾವು ಕೈಜೋಡಿಸಿದ್ದೇವೆ. ಅವರ ಕೆಲಸವು ಅಗತ್ಯತೆ-ಆಧರಿತ ಚಿಕಿತ್ಸಕ ಮಧ್ಯಪ್ರವೇಶಗಳು, ಶಿಕ್ಷಣ (ವಿಶೇಷ, ಮತ್ತು ಒಳಗೊಳ್ಳುವ/ಸಮನ್ವಯ), ಉದ್ಯೋಗ ಮತ್ತು ಜೀವನೋಪಾಯದ ಬೆಂಬಲ, ದಿವ್ಯಾಂಗರಾದ ಹಿರಿಯರು ಮತ್ತು ತೀವ್ರ/ಅಗಾಧವಾದ ದಿವ್ಯಾಂಗತೆಯನ್ನು ಹೊಂದಿರುವ ವ್ಯಕ್ತಿಗಳು ಮತ್ತು ಇತರ ಸಂಬಂಧಿತ ತೊಂದರೆಗಳಿಗೆ ಸಹಾಯದ ಮೂಲಕ ಜೀವನ ನಡೆಸುವ ಸೇವೆಗಳನ್ನು ಒದಗಿಸುವ ವ್ಯಾಪಕವಾದ ಮಧ್ಯಪ್ರವೇಶಗಳನ್ನು ಒಳಗೊಂಡಿದೆ.

disability-source-image

ಚಿತ್ರ ಕ್ರೆಡಿಟ್ - i stock

ದಿವ್ಯಾಂಗತೆಯ ಕುರಿತಾದ ನಮ್ಮ ಕೆಲಸದಲ್ಲಿನ ಎರಡು ನಿರ್ಣಾಯಕ ಅಂಶಗಳೆಂದರೆ, ಪುನರ್ವಸತಿ ಮತ್ತು ಒಳಗೊಳ್ಳುವಿಕೆ. ನಾವು ಸಮುದಾಯ-ಆಧರಿತ ಪುನರ್ವಸತಿ ಅಥವಾ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೇಂದ್ರ-ಆಧರಿತ ವಿಧಾನದ ಮೂಲಕ ಮಧ್ಯಪ್ರವೇಶಿಕೆಯ ಮಾದರಿಗಳನ್ನು ಬೆಂಬಲಿಸುತ್ತೇವೆ.

ದೃಷ್ಟಿಹೀನತೆ ಹೊಂದಿರುವ ಜನರಿಗೆ ಉದ್ಯೋಗಾವಕಾಶಗಳು, ದಿವ್ಯಾಂಗರಾದ ಮಹಿಳೆಯರಿಗೆ ಮನರಂಜನೆ ಮತ್ತು ಕ್ರೀಡೆಗಳಿಗೆ ಅವಕಾಶ ದೊರೆಯುವಂತೆ ಮಾಡುವುದು ಮತ್ತು ಮಕ್ಕಳಲ್ಲಿ ದಿವ್ಯಾಂಗತೆಯನ್ನು ತಡೆಗಟ್ಟುವಿಕೆಗೆ ನಾವು ಉತ್ತೇಜಿಸುತ್ತೇವೆ.

ದಿವ್ಯಾಂಗರ ಆರೈಕೆ, ಕಲ್ಯಾಣ ಮತ್ತು ರಕ್ಷಣೆಯಲ್ಲಿನ ಸಮಸ್ಯೆಗಳು ಮತ್ತು ಲೋಪದೋಷಗಳನ್ನು ಪರಿಹರಿಸುವುದರ ಜೊತೆಗೆ, ನಾವು ಅವರ ಅಗತ್ಯಗಳಿಗೆ ಸಮರ್ಥ ಮತ್ತು ಸಹಾನೂಭೂತಿಯುಳ್ಳ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸುತ್ತೇವೆ. ಇದು ಆರೈಕೆ ಮಾಡುವವರು, ಮುಂಚೂಣಿ ಕಾರ್ಯಕರ್ತರು, ವೈದ್ಯಕೀಯ ವೃತ್ತಿಪರರು ಮತ್ತು ದಿವ್ಯಾಂಗತೆ ಕುರಿತಾದ ತಮ್ಮ ಕೆಲಸವನ್ನು ವಿಸ್ತರಿಸಲು/ತೀವ್ರಗೊಳಿಸಲು ಆಸಕ್ತಿ ಹೊಂದಿರುವ ಇತರ ಸಂಸ್ಥೆಗಳ ಸಾಮರ್ಥ್ಯ-ವರ್ಧನೆಯನ್ನು ಒಳಗೊಂಡಿದೆ.

ದಿವ್ಯಾಂಗತೆಯ ಅಡಿಯಲ್ಲಿನ ನಮ್ಮ ಪಾಲುದಾರರ ಕೆಲಸವು ಹಲವಾರು ಬದಲಾವಣೆಗಳು ಮತ್ತು ಸುಧಾರಣೆಗಳಿಗೆ ಕಾರಣವಾಗಿದೆ. ಅವುಗಳಲ್ಲಿ ಮುಖ್ಯವಾದುವೆಂದರೆ, ಬೆಳವಣಿಗೆಯಲ್ಲಿನ ವಿಳಂಬ ಮತ್ತು ದಿವ್ಯಾಂಗತೆಯನ್ನು ಹೊಂದಿರುವ ಮಕ್ಕಳನ್ನು ಸರಿಯಾದ ಸಮಯಕ್ಕೆ ಗುರುತಿಸುವುದು. ಇದು ದಿವ್ಯಾಂಗತೆಯ ತೀವ್ರತೆಯನ್ನು ಕಡಿಮೆ ಮಾಡಲು, ಜೀವನದ ಗುಣಮಟ್ಟವನ್ನು ಸುಧಾರಿಸಲು ಮತ್ತು ಕುಟುಂಬ ಮತ್ತು ಸಮಾಜದಲ್ಲಿ ಹೆಚ್ಚಿನ ಒಳಗೊಳ್ಳುವಿಕೆಗೆ ಕಾರಣವಾಗಿದೆ.

ನಮ್ಮ ಪಾಲುದಾರರು ಸಮುದಾಯದಲ್ಲಿ ಒಳಗೊಳ್ಳುವಿಕೆಯ ಅಭ್ಯಾಸಗಳ ಮೇಲೆ ಸಹ ಕೆಲಸ ಮಾಡಿದ್ದಾರೆ. ಈ ಮೂಲಕ ಕುಟುಂಬ, ಶಾಲೆಗಳು, ಕೆಲಸದ ಸ್ಥಳಗಳು ಮತ್ತು ಒಟ್ಟಾರೆ ಸಮಾಜದಲ್ಲಿ ಅರ್ಥಪೂರ್ಣವಾದ ಒಳಗೊಳ್ಳುವಿಕೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ.

ಅವರು ದಿವ್ಯಾಂಗತೆಯುಳ್ಳ ವ್ಯಕ್ತಿಗಳಿಗೆ ವಿಶಿಷ್ಟ ದಿವ್ಯಾಂಗತೆಯ ಗುರುತಿನ ಚೀಟಿ ಅಥವಾ ಯುಡಿಐಡಿ, ವಿಮೆ, ಸ್ಕಾಲರ್‌ಶಿಪ್‌ಗಳು ಮತ್ತು ಪಿಂಚಣಿಗಳಂತಹ ಹಕ್ಕುಗಳು ಮತ್ತು ಅಧಿಕಾರಗಳು ದೊರೆಯುವಂತೆ ಸಹ ನೋಡಿಕೊಂಡಿದ್ದಾರೆ.

ದಿವ್ಯಾಂಗತೆಯ ಕುರಿತಾದ ನಮ್ಮ ಕೆಲಸವು ಅಷ್ಟೇ ಮಹತ್ವದ ಕ್ಷೇತ್ರವಾದ ಮಾನಸಿಕ ಆರೋಗ್ಯವನ್ನು ಸಹ ಒಳಗೊಂಡಿದೆ. ಅತ್ಯಂತ ದುರ್ಬಲ ಹಿನ್ನೆಲೆಯ ಜನಸಮೂಹಕ್ಕೆ ಮಾನಸಿಕ ಆರೋಗ್ಯ ಸೇವೆಗಳ ಲಭ್ಯತೆ, ಅವಕಾಶ ಮತ್ತು ಕೈಗೆಟುಕುವಿಕೆಯನ್ನು ಖಾತ್ರಿಪಡಿಸುವ ಸಂಸ್ಥೆಗಳೊಂದಿಗೆ ಜೊತೆಗೂಡುವತ್ತ ನಾವು ಗಮನಹರಿಸುತ್ತೇವೆ. ಇದು ಸಮುದಾಯ-ಆಧರಿತ ಮತ್ತು ಸಮುದಾಯ-ನೇತೃತ್ವದ ಮಾನಸಿಕ ಆರೋಗ್ಯ ಸೇವೆಗಳಿಗೆ ಮಧ್ಯಪ್ರವೇಶಗಳು ಮತ್ತು ದೀರ್ಘಕಾಲದ ಮಾನಸಿಕ ಅಸ್ವಸ್ಥರಿಗೆ ಸಾಂಸ್ಥಿಕ ಆರೈಕೆ ನೀಡುವುದನ್ನು ಒಳಗೊಂಡಿದೆ. ಪ್ರಸ್ತುತ, 17 ಸಂಸ್ಥೆಗಳಿಗೆ ಅನುದಾನವನ್ನು ನೀಡುವ ಮೂಲಕ ನಾವು ಇಂತಹ ಕೆಲಸವನ್ನು ಬೆಂಬಲಿಸುತ್ತಿದ್ದೇವೆ.

ದಿವ್ಯಾಂಗತೆಯ ಕ್ಷೇತ್ರದಲ್ಲಿ ನಾವು ನಮ್ಮ ಸಹವರ್ತಿಗಳೊಂದಿಗೆ ಕೆಲಸ ಮಾಡುತ್ತೇವೆ.

© 2025 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
This site is registered on wpml.org as a development site. Switch to a production site key to remove this banner.