ಹಕ್ಕುತ್ಯಾಗ

disclaimer

ಈ ವೆಬ್‌ ತಾಣದಲ್ಲಿರುವ ಎಲ್ಲಾ ವಿಷಯಗಳು ಸಾಮಾನ್ಯ ಮಾಹಿತಿ ಅಥವಾ ಬಳಕೆಗಾಗಿ ಮಾತ್ರವೇ ಇವೆ

ಈ ವೆಬ್‌ ತಾಣದಲ್ಲಿರುವ ಎಲ್ಲಾ ವಿಷಯಗಳು ಸಾಮಾನ್ಯ ಮಾಹಿತಿ ಅಥವಾ ಬಳಕೆಗಾಗಿ ಮಾತ್ರವೇ ಇವೆ. ಮಾಹಿತಿಯುಕ್ತ, ವೈಯಕ್ತಿಕ, ವಾಣಿಜ್ಯೇತರ ಬಳಕೆಯನ್ನು ಹೊರತುಪಡಿಸಿ, ಅಜೀಂ ಪ್ರೇಮ್‌ ಜಿ ಫೌಂಡೇಶನ್‌ ನ ಲಿಖಿತ ಪೂರ್ವಾನುಮತಿ ಇಲ್ಲದೆ ಈ ವೆಬ್‌ ಸೈಟ್‌ ನಲ್ಲಿರುವ ವಿನ್ಯಾಸ ಅಥವಾ ರೂಪ, ವೆಬ್‌ ಸೈಟ್‌ ನ ವಿನ್ಯಾಸ ಅಥವಾ ರೂಪದ ವೈಯಕ್ತಿಕ ವಿಭಾಗ, ಅಜೀಂ ಪ್ರೇಮ್‌ ಜಿ ಫೌಂಡೇಶನ್‌ ನ ಲೋಗೋಗಳು ಅಥವಾ ಈ ವೆಬ್‌ ತಾಣದ ಯಾವುದೇ ವಿಷಯ ಅಥವಾ ಸಾಮಗ್ರಿಯ ಮಾರ್ಪಾಡು, ಪುನರುತ್ಪಾದನೆ ಅಥವಾ ಹಂಚಿಕೆಯನ್ನು ಮಾಡುವಂತಿಲ್ಲ.

ಈ ವೆಬ್‌ ತಾಣ, ಅಥವಾ ವೆಬ್‌ ತಾಣದಲ್ಲಿ ಉಲ್ಲೇಖಿಸಲಾದ ಯಾವುದೇ ಉತ್ಪನ್ನಗಳು, ಪ್ರಕ್ರಿಯೆ ಅಥವಾ ಸೇವೆಗಳ ಗುಣಮಟ್ಟ, ನಿಖರತೆ ಮತ್ತು ಸಂಪೂರ್ಣತೆಗೆ ಸಂಬಂಧಿಸಿದಂತೆ, ವ್ಯಕ್ತಪಡಿಸಲಾದ ಅಥವಾ ಸೂಚ್ಯ, ಯಾವುದೇ ಖಾತರಿಯನ್ನು ಅಜೀಂ ಪ್ರೇಮ್‌ ಜಿ ಫೌಂಡೇಶನ್‌ ಹೊರಗಿಡುತ್ತದೆ. ಈ ವೆಬ್‌ ತಾಣ ಅಥವಾ ಇದರಲ್ಲಿರುವ ಯಾವುದೇ ವಿಷಯ, ಮಾಹಿತಿ, ಸಾಮಗ್ರಿಗಳು ಅಥವಾ ಸೇವೆಗಳ ಆಕ್ಸೆಸ್‌ ಅಥವಾ ಬಳಕೆಯಿಂದಾಗಿ ಅಥವಾ ಇದಕ್ಕೆ ಸಂಬಂಧಿಸಿದಂತೆ ಉಂಟಾಗುವ ಯಾವುದೇ ನೇರ, ಪರೋಕ್ಷ, ಪ್ರಾಸಂಗಿಕ, ಫಲಿತ ಅಥವಾ ವಿಶೇಷ ಹಾನಿಗಾಗಿ ಒಪ್ಪಂದ, ಖಾಸಗಿ ತಕ್ಸೀರು, ಕಡ್ಡಾಯ ಹೊಣೆಗಾರಿಕೆ ಅಥವಾ ಇತರ ರೀತಿಯಲ್ಲಿ ಅಜೀಂ ಪ್ರೇಮ್‌ ಜಿ ಫೌಂಡೇಶನ್‌ ಜವಾಬ್ದಾರನಲ್ಲ.

ಈ ವೆಬ್‌ ತಾಣ ಮತ್ತು ಇದರಲ್ಲಿರುವ ಎಲ್ಲಾ ವಿಷಯಗಳ ಹಕ್ಕುಸ್ವಾಮ್ಯವು ಸಂಪೂರ್ಣವಾಗಿ ಅಜೀಂ ಪ್ರೇಮ್‌ ಜಿ ಫೌಂಡೇಶನ್‌ ಬಳಿ ಇರುತ್ತದೆ. ಅಜೀಂ ಪ್ರೇಮ್‌ ಜಿ ಫೌಂಡೇಶನ್,‌ ಅನುಕೂಲತೆಗಾಗಿ, ಇತರ ಸಂಸ್ಥೆಗಳು ಮತ್ತು ವ್ಯಕ್ತಿಗಳು ನಿರ್ವಹಿಸುವ ವೆಬ್‌ ಸೈಟ್‌ ಗಳ ಕೊಂಡಿಗಳನ್ನು ಒದಗಿಸಬಹುದು. ಆದರೆ ಅವುಗಳಲ್ಲಿರುವ ವಿಷಯ ಅಥವಾ ಅಂತಹ ವೆಬ್‌ ಸೈಟ್‌ ಗಳ ಬಳಕೆಗೆ ಸಂಬಂಧಿಸಿದಂತೆ ಯಾವುದೇ ಜವಾಬ್ದಾರಿಯನ್ನು ಅನುಮೋದಿಸುವುದಿಲ್ಲ ಅಥವಾ ಸ್ವೀಕರಿಸುವುದಿಲ್ಲ.

ಈ ವೆಬ್‌ ಸೈಟ್‌ ನಲ್ಲಿರುವ ವಿಷಯಗಳು ಅಥವಾ ಇತರ ಇಂಟರ್‌ ನೆಟ್‌ ಸಂಪನ್ಮೂಲಗಳಿಗೆ ಇದು ಹೊಂದಿರುವ ಹೈಪರ್‌ ಲಿಂಕ್‌ ಗಳಿಗೆ ಸಂಬಂಧಿಸಿದಂತೆ ಮೂರನೇ ಪಕ್ಷದ ಹಕ್ಕುಗಳನ್ನು ಉಲ್ಲಂಘಿಸದಿರುವುದು, ಹಕ್ಕು, ವ್ಯಾಪಾರಶೀಲತೆ, ಕ್ಷಮತೆ, ನಿರ್ದಿಷ್ಟ ಉದ್ದೇಶಕ್ಕಾಗಿ ಹೊಂದಿರುವ ಕ್ಷಮತೆ ಮತ್ತು ಕಂಪ್ಯೂಟರ್‌ ವೈರಸ್‌ ನಿಂದ ಮುಕ್ತತೆ ಹಾಗೂ ಇತ್ಯಾದಿ ಖಾತರಿಗಳಿಗೆ ಸೀಮಿತವಾಗದೆ ಯಾವುದೇ ಖಾತರಿಯನ್ನು ನೀಡಲಾಗುವುದಿಲ್ಲ.

ವೀಡಿಯೋ ಅಥವಾ ಪಠ್ಯದ ಮೂಲಕ ಭಾಷಣಕಾರರು ವ್ಯಕ್ತಪಡಿಸುವ ಅಭಿಪ್ರಾಯಗಳು ಅಜೀಂ ಪ್ರೇಮ್‌ ಜಿ ಫೌಂಡೇಶನ್‌ ನ ಅಭಿಪ್ರಾಯಗಳನ್ನು ಪ್ರತಿನಿಧಿಸುವುದಿಲ್ಲ ಹಾಗೂ ಇದರಲ್ಲಿರುವ ವಿಷಯಕ್ಕೆ ಸಂಬಂಧಿಸಿದಂತೆ ಅಜೀಂ ಪ್ರೇಮ್‌ ಜಿ ಫೌಂಡೇಶನ್‌ ನ ವಿರುದ್ಧ ಯಾವುದೇ ಕ್ರಮಕ್ಕೆ ಆಸ್ಪದವಿರುವುದಿಲ್ಲ. ಇವು ಚರ್ಚೆ ಮತ್ತು ಸಂವಾದಕ್ಕಾಗಿ ಮಾತ್ರವೇ ಇವೆ.

ಮೇಲೆ ಅದೇನೇ ಹೇಳಿದ್ದರೂ, ವೆಬ್‌ ತಾಣ ಮತ್ತು/ಅಥವಾ ಹಕ್ಕುತ್ಯಾಗವನ್ನು ಮಾರ್ಪಡಿಸುವ ಹಕ್ಕನ್ನು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು ಕಾಯ್ದಿರಿಸುತ್ತದೆ ಮತ್ತು ಅಂತಹ ಮಾರ್ಪಾಡುಗಳನ್ನು ಬಳಕೆದಾರರಿಗೆ ತಿಳಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ ಹಾಗೂ ಅವರು ಇದಕ್ಕೆ ಬದ್ಧರಾಗಿರುತ್ತಾರೆ. ಒಂದು ವೇಳೆ ಈ ಹಕ್ಕುತ್ಯಾಗದ ಯಾವುದೇ ನಿಬಂಧನೆಯು ಯಾವುದೇ ಕಾರಣಕ್ಕಾಗಿ ಅಮಾನ್ಯ, ಕಾನೂನುಬಾಹಿರ ಮತ್ತು ಜಾರಿಗೊಳಿಸಲಾಗದು ಎಂದು ತೀರ್ಮಾನಿಸಲ್ಪಟ್ಟರೆ, ಉಳಿದ ನಿಬಂಧನೆಗಳ ಮಾನ್ಯತೆ, ಕಾನೂನುಬದ್ಧತೆ ಮತ್ತು ಜಾರಿಗೊಳಿಸುವಿಕೆಗೆ ಯಾವುದೇ ಬಾಧ್ಯತೆ ಅಥವಾ ಧಕ್ಕೆ ಉಂಟಾಗುವುದಿಲ್ಲ.

© 2025 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
This site is registered on wpml.org as a development site. Switch to a production site key to remove this banner.