ನಾವು ಎಲ್ಲಿ ಕೆಲಸ ಮಾಡುತ್ತೇವೆ

where-we-work

ನಾವು ನೇರವಾಗಿ ಮತ್ತು ಸಹವರ್ತಿಗಳ ಮೂಲಕ ಭಾರತದಾದ್ಯಂತ ಕೆಲಸ ಮಾಡುತ್ತೇವೆ

ನಾವು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅತ್ಯಂತ ದುರ್ಬಲವಾಗಿರುವ ಮತ್ತು ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳು ವಾಸಿಸುತ್ತಿರುವ ಸುಲಭವಾಗಿ ತಲುಪಲಾಗದ ಪ್ರದೇಶಗಳಲ್ಲೂ ಕೆಲಸ ಮಾಡುತ್ತೇವೆ.​

wherewework

ಚಿತ್ರ ಕೃಪೆ – ಪುರುಷೋತ್ತಮ್‌ ಠಾಕೂರ್‌

ನಮ್ಮ ಕೆಲಸವು, ಮುಖ್ಯವಾಗಿ ಶಿಕ್ಷಣ ಕ್ಷೇತ್ರದಲ್ಲಿ 7 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶಕ್ಕೆ ಹರಡಿದೆ.​

ನೇರವಾಗಿ ತಳಸ್ತರದಲ್ಲಿ ಮಾಡುವ ಕೆಲಸದ ಜೊತೆಗೆ, ನಾವು ದೇಶದಾದ್ಯಂತ ಪಾಲುದಾರರ ಜೊತೆ ಕೆಲಸ ಮಾಡುತ್ತೇವೆ. ಮಾನವ ಅಭಿವೃದ್ಧಿ ಮತ್ತು ಯೋಗಕ್ಷೇಮಗಳಿಗೆ ಸಂಬಂಧಿಸಿದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ ಪಾಲುದಾರರ ಸಹಯೋಗದಲ್ಲಿ ಮಾಡುವ ಕೆಲಸಕ್ಕೆ ತಕ್ಕಂತೆ ನಾವು ನಮ್ಮ ಸಂಪನ್ಮೂಲಗಳನ್ನು ನಿಯೋಜಿಸುತ್ತೇವೆ.​

ಲೋಕೋಪಕಾರಕ ಘಟಕದ ಅನುದಾನ ಕಾರ್ಯಕ್ರಮವು ಸಹಭಾಗಿತ್ವದಲ್ಲಿ ನಾವು ಮಾಡುವ ಕೆಲಸಕ್ಕೆ ಒಂದು ಉತ್ತಮ ಉದಾಹರಣೆ. ಲಿಂಗ-ಸಂಬಂಧಿ ನ್ಯಾಯ, ಸಾಂವಿಧಾನಿಕ ಮೌಲ್ಯಗಳು, ವೈಕಲ್ಯತೆ ಮತ್ತು ಆಡಳಿತ ದಂತಹ ವಿಷಯಾಧರಿತ ಕ್ಷೇತ್ರಗಳಲ್ಲಿ ದುಡಿಯುತ್ತಿರುವ 1,150ಕ್ಕೂ ಹೆಚ್ಚು ಲಾಭೋದ್ದೇಶರಹಿತ ಮತ್ತು ನಾಗರಿಕ ಸಮಾಜ ಸಂಸ್ಥೆಗಳಿಗೆ ನಾವು ನೆರವು ನೀಡುತ್ತೇವೆ.

© 2025 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
This site is registered on wpml.org as a development site. Switch to a production site key to remove this banner.