ಗೌಪ್ಯತೆ ನೀತಿ

PrivacyPolicy

ಅಜೀಂ ಪ್ರೇಮ್‌ ಜಿ ಫೌಂಡೇಶನ್‌ ನ (ʻʻಫೌಂಡೇಶನ್‌ʼʼ) ವೆಬ್‌ ಸೈಟ್‌ (ʼʼವೆಬ್‌ ಸೈಟ್”), ವಿದ್ಯಾರ್ಥಿಗಳು, ಸದಸ್ಯರು, ಪಾಲುದಾರರು ಮತ್ತು ಸಂದರ್ಶಕರನ್ನು ವೆಬ್‌ ಸೈಟ್‌ ಮೂಲಕ ತೊಡಗಿಸಿಕೊಳ್ಳುತ್ತದೆ. ವೆಬ್‌ ಸೈಟ್‌ ಮೂಲಕ ನಾವು ಬಳಕೆದಾರರಿಂದ ಕೆಲವೊಂದು ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಬಹುದು. ತನ್ನ ಬಳಕೆದಾರರಿಂದ ಸಂಗ್ರಹಿಸಿದ ವೈಯಕ್ತಿಕ ಮಾಹಿತಿಯ ಭದ್ರತೆ ಹಾಗೂ ಅವರ ಗೌಪ್ಯತೆಯ ಸುರಕ್ಷತೆಯ ಬದ್ಧತೆಯನ್ನು ಫೌಂಡೇಷನ್‌ ಹೊಂದಿದೆ.

ಈ ಗೌಪ್ಯತೆಯ ನೀತಿಯು (“ನೀತಿʼʼ) ಸಂಗ್ರಹಿಸಲಾಗುವ ವೈಯಕ್ತಿಕ ಮಾಹಿತಿಯ ವಿವರಗಳು, ಅದನ್ನು ಹೇಗೆ ಸಂಗ್ರಹಿಸಲಾಗುತ್ತದೆ, ಯಾರಿಂದ ಮತ್ತು ಯಾವ ಉದ್ದೇಶಕ್ಕಾಗಿ ಇದನ್ನು ಬಳಸಲಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.

1. ಅನ್ವಯಿಕತೆ

ಈ ನೀತಿಯು ವೆಬ್‌ಸೈಟ್‌ನ ಎಲ್ಲ ಬಳಕೆದಾರರಿಗೆ ಅನ್ವಯವಾಗುತ್ತದೆ.

2. ಸಂಗ್ರಹಿಸಲಾಗುವ ವೈಯಕ್ತಿಕ ಮಾಹಿತಿಯ ಪ್ರಕಾರಗಳು ಮತ್ತು ಸಂಗ್ರಹದ ವಿಧಾನ

a. ʻʻವೈಯಕ್ತಿಕ ಮಾಹಿತಿʼʼಯನ್ನು ವ್ಯಕ್ತಿಯನ್ನು ಅನನ್ಯವಾಗಿ ಗುರುತಿಸಲು, ಸಂಪರ್ಕಿಸಲು ಅಥವಾ ಪತ್ತೆ ಹಚ್ಚಲು ತಾನಾಗಿಯೇ ಬಳಸಲು ದೊರೆಯುವ ಯಾವುದೇ ಮಾಹಿತಿ ಅಥವಾ ಇತರ ಲಭ್ಯ ಅಥವಾ ಲಭ್ಯವಾಗಲಿರುವ ಮಾಹಿತಿಯ ಸಂಯೋಜನೆ ಎಂದು ಕರೆಯಲಾಗಿದೆ.

 

b. ಸಂಗ್ರಹಿಸಲಾಗುವ ವೈಯಕ್ತಿಕ ಮಾಹಿತಿಯ ಪ್ರಕಾರಗಳು: ನಾವು ಸಂಗ್ರಹಿಸಲಾಗುವ ಮತ್ತು/ಅಥವಾ ಹೊಂದಲಾಗುವ ವೈಯಕ್ತಿಕ ಮಾಹಿತಿಯು ನಿಮ್ಮ ಹೆಸರು, ತಂದೆಯ ಹೆಸರು, ಹುಟ್ಟಿದ ದಿನಾಂಕ, ವಿಳಾಸ, ಇಮೇಲ್‌ ವಿಳಾಸ, ಮೊಬೈಲ್‌ ಸಂಖ್ಯೆ ಹಾಗೂ ಇಷ್ಟಕ್ಕೆ ಸೀಮಿತವಾಗದೆ ಇತ್ಯಾದಿ ಮಾಹಿತಿಗಳನ್ನು ಒಳಗೊಂಡಿರಬಹುದು.

 

c. ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವ ವಿಧಾನ:

  • ವೈಯಕ್ತಿಕ ಮಾಹಿತಿಯನ್ನು, ಬಳಕೆದಾರರ ಸ್ವಯಂಪ್ರೇರಿತ ಬಹಿರಂಗಪಡಿಸುವಿಕೆ ಅಥವಾ ವೆಬ್‌ಸೈಟ್‌ನಲ್ಲಿ ಬಳಕೆದಾರರು ಸ್ವಯಂಚಾಲಿತವಾಗಿ ಜಾಲಾಡುವಾಗ ಸಂಗ್ರಹಿಸಬಹುದು.
  • ವೈಯಕ್ತಿಕ ಮಾಹಿತಿಯನ್ನು, ವೆಬ್‌ಸೈಟ್‌ನಲ್ಲಿ ಬಳಕೆದಾರರು ನೋಂದಣಿ ನಮೂನೆಗಳನ್ನು ಅಥವಾ ಇತರ ಅರ್ಜಿಗಳನ್ನು ಭರ್ತಿ ಮಾಡುವಾಗ ಸ್ವಯಂಪ್ರೇರಿತವಾಗಿ ಒದಗಿಸಿರಬಹುದು.
  • ವೈಯಕ್ತಿಕ ಮಾಹಿತಿಯನ್ನು, ಬಳಕೆದಾರರು ಈ ವೆಬ್‌ಸೈಟ್‌ ಅನ್ನು ಜಾಲಾಡುವಾಗ ನೇರವಾಗಿ ಅಥವಾ ತೃತೀಯ ಪಕ್ಷಗಳ ಮೂಲ ವೆಬ್‌ಸೈಟ್‌ನಿಂದ ಸ್ವಯಂಚಾಲಿತವಾಗಿ ಸಂಗ್ರಹಿಸಬಹುದು.

3. ವೈಯಕ್ತಿಕ ಮಾಹಿತಿಯ ಬಳಕೆ

ಈ ವೆಬ್‌ಸೈಟ್‌ನಿಂದ ಸಂಗ್ರಹಿಸಲಾದ ಮಾಹಿತಿಯನ್ನು ಫೌಂಡೇಷನ್‌ನಿಂದ ಈ ಕೆಳಗಿನ ವಾಣಿಜ್ಯೇತರ ಉದ್ದೇಶಗಳಿಗಾಗಿ ಬಳಸಲ್ಪಡಬಹುದು:

ಈ ವೆಬ್‌ಸೈಟ್‌ನಿಂದ ಸಂಗ್ರಹಿಸಲಾದ ಮಾಹಿತಿಯನ್ನು ಫೌಂಡೇಷನ್‌ನಿಂದ ಈ ಕೆಳಗಿನ ವಾಣಿಜ್ಯೇತರ ಉದ್ದೇಶಗಳಿಗಾಗಿ ಬಳಸಲ್ಪಡಬಹುದು:

  • ವೆಬಿನಾರ್‌/ಸಾರ್ವಜನಿಕ ಭಾಷಣಗಳು ಮತ್ತು ಫೌಂಡೇಶನ್‌ನಿಂದ ಆಯೋಜಿಸಲ್ಪಡುವ ಇತರ ಕಾರ್ಯಕ್ರಮಗಳ ನೋಂದಣಿಗಾಗಿ ಮತ್ತು ಈ ಕುರಿತಂತೆ ಬಳಕೆದಾರರಿಗೆ ಇತ್ತೀಚಿನ ಮಾಹಿತಿಯನ್ನು ಕಳುಹಿಸುವುದಕ್ಕಾಗಿ.
  • ದಾಖಲಾತಿ ಉದ್ದೇಶಗಳಿಗಾಗಿ ಮತ್ತು ಈ ಕುರಿತಂತೆ ಬಳಕೆದಾರರಿಗೆ ಮಾಹಿತಿ/ ಇತ್ತೀಚಿನ ಮಾಹಿತಿಯನ್ನು ನೀಡುವುದಕ್ಕಾಗಿ.
  • ವೆಬ್‌ಸೈಟ್‌ ಕುರಿತಂತೆ ಬಳಕೆದಾರರ ಅನುಭವವನ್ನು ಸುಧಾರಿಸಲು ಫೌಂಡೇಷನ್‌ಗೆ ಸಹಾಯ ಮಾಡುವ ಬಳಕೆದಾರ ವಿದ್ಯಮಾನಗಳು ಮತ್ತು ಮಾದರಿಗಳನ್ನು ನೆಲೆಗೊಳಿಸುವುದಕ್ಕಾಗಿ ಆಂತರಿಕ ಮೌಲ್ಯಮಾಪನ, ಕ್ರಮಗಳು ಮತ್ತು ಕಾರ್ಯಾಚರಣೆಯನ್ನು ಕೈಗೊಳ್ಳುವುದಕ್ಕಾಗಿ.
  • ಫೌಂಡೇಷನ್‌ನ ವೆಬ್‌ ಪುಟಗಳನ್ನು ಪ್ರಚುರ ಪಡಿಸಲು.

4. ವೈಯಕ್ತಿಕ ಮಾಹಿತಿಯನ್ನು ಉಳಿಸಿಕೊಳ್ಳುವುದು

ಸಂಗ್ರಹಿಸಲಾದ ಎಲ್ಲ ವೈಯಕ್ತಿಕ ಮಾಹಿತಿಯನ್ನು, ಈ ನೀತಿಯಲ್ಲಿ ಹೇಳಲಾದ ಉದ್ದೇಶಗಳನ್ನು ಈಡೇರಿಸಲು ಅಥವಾ ಯಾವುದೇ ಕಾನೂನು ಅಥವಾ ನಿಯಂತ್ರಕ ಕಟ್ಟುಪಾಡನ್ನು ಪಾಲಿಸುವುದಕ್ಕಾಗಿ ಫೌಂಡೇಷನ್‌ಗೆ ಅಗತ್ಯವಿರುವಷ್ಟು ಸಮಯದ ತನಕ ಉಳಿಸಿಕೊಳ್ಳಲಾಗುವುದು.

ಇಲ್ಲಿ ತಿಳಿಸಲಾದ ಯಾವುದೇ ಅಂಶವು ವೈಯಕ್ತಿಕ ಮಾಹಿತಿ ಸಂಚಯದಿಂದ ಸೃಷ್ಟಿಸಲಾದ ಅನಾಮಧೇಯ, ಕ್ರೋಡೀಕೃತ ಡೇಟಾಸೆಟ್ ಅಥವಾ ಡೇಟಾಸೆಟ್‌ಗಳನ್ನು ಬಳಸಿ ರಚಿಸಲಾದ ಯಾವುದೇ ವರದಿ, ಹೀಟ್‌ ಮ್ಯಾಪ್‌ ಅಥವಾ ಇತರ ಚಿತ್ರಣಕ್ಕೆ ಅನ್ವಯವಾಗುವುದಿಲ್ಲ.

5. ಬಹಿರಂಗಗೊಳಿಸುವಿಕೆ ಮತ್ತು ವರ್ಗಾವಣೆಗಳು

ಈ ವೆಬ್‌ಸೈಟ್‌, ತನ್ನ ಆಂತರಿಕ ಮೌಲ್ಯಮಾಪನ, ಕ್ರಮಗಳು, ಕಾರ್ಯನಿರ್ವಹಣೆ ಮತ್ತು ಈ ವೆಬ್‌ಸೈಟ್‌ ಅನ್ನು ಪ್ರಚುರ ಪಡಿಸುವುದಕ್ಕಾಗಿ ತೃತೀಯ ಪಕ್ಷಗಳು ನೀಡುವ ವಿಶ್ಲೇಷಕ ಮತ್ತು ಟ್ರ್ಯಾಕಿಂಗ್‌ ಸಾಧನಗಳನ್ನು ಬಳಸುತ್ತದೆ.

ಈ ನೀತಿಯಲ್ಲಿ ತಿಳಿಸಲಾದ ಉದ್ದೇಶಗಳನ್ನು ಈಡೇರಿಸುವುದಕ್ಕಾಗಿ ಅಂತಹ ತೃತೀಯ ಪಕ್ಷಗಳಿಗೆ ವೈಯಕ್ತಿಕ ಮಾಹಿತಿಯನ್ನು ಫೌಂಡೇಷನ್‌ ಬಹಿರಂಗಗೊಳಿಸಬಹುದು.

ಕಡ್ಡಾಯವಾಗಿ ಈ ನೀತಿಯಲ್ಲಿ ತಿಳಿಸಿದ ಸೀಮಿತ ಮತ್ತು ವಾಣಿಜ್ಯೇತರ ಉದ್ದೇಶಗಳಿಗಾಗಿ, ಫೌಂಡೇಷನ್‌ ಬಹಿರಂಗಗೊಳಿಸಿದ ವೈಯಕ್ತಿಕ ಮಾಹಿತಿಯನ್ನು ಬಳಸಲು ಅಂತಹ ತೃತೀಯ ಪಕ್ಷಗಳಿಗೆ ಅನುಮತಿ ನೀಡಲಾಗಿದೆ.

ಈ ನೀತಿಯಲ್ಲಿ ತಿಳಿಸಿರುವ ಕಾರಣಗಳನ್ನು ಹೊರತುಪಡಿಸಿ, ಈ ವೆಬ್‌ಸೈಟ್‌ನಿಂದ ಸಂಗ್ರಹಿಸಿದ ವೈಯಕ್ತಿಕ ಮಾಹಿತಿಯನ್ನು ಉಳಿದ ಯಾವುದೇ ತೃತೀಯ ಪಕ್ಷಕ್ಕೆ ಬಹಿರಂಗಗೊಳಿಸುವುದಿಲ್ಲ ಅಥವಾ ವರ್ಗಾವಣೆ ಮಾಡಲಾಗುವುದಿಲ್ಲ.

ಅಲ್ಲದೆ, ಕೆಳಗೆ ಉಲ್ಲೇಖಿಸಿದ ಉದ್ದೇಶಗಳನ್ನು ಹೊರತುಪಡಿಸಿ ಇತರ ವಿಶ್ವವಿದ್ಯಾಲಯಗಳು, ಕಾಲೇಜುಗಳು, ನಾಗರಿಕ ಸಮಾಜದ ಸಂಸ್ಥೆಗಳು, ಲಾಭೋದ್ದೇಶವಿರುವ ಸಂಸ್ಥೆಗಳು ಇತ್ಯಾದಿಗಳೊಂದಿಗೆ ವೈಯಕ್ತಿಕ ಮಾಹಿತಿಯನ್ನು ಸ್ವಯಂಪ್ರೇರಿತವಾಗಿ ಫೌಂಡೇಷನ್‌ ವತಿಯಿಂದ ಹಂಚಿಕೊಳ್ಳಲಾಗುವುದಿಲ್ಲ.

(ಅ) ಬಳಕೆದಾರಳಿ/ನಿಂದ ಫೌಂಡೇಷನ್‌ ನಿರ್ದಿಷ್ಟ ಸಮ್ಮತಿಯನ್ನು ಹೊಂದಿದ್ದರೆ; ಅಥವಾ  

(ಆ) ಯಾವುದೇ ಸರ್ಕಾರದ ಅಥವಾ ಕಾನೂನು ಕ್ರಮಕ್ಕೆ ಅನುಸಾರವಾಗಿ ಅಂತಹ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಕಾದಾಗ

6. ದತ್ತಾಂಶ ಸುರಕ್ಷತಾ ಕ್ರಮಗಳು

ಫೌಂಡೇಷನ್‌ನ ಸ್ವಾಧೀನದಲ್ಲಿರುವ ಬಳಕೆದಾರರ ವೈಯಕ್ತಿಕ ದತ್ತಾಂಶದ ರಕ್ಷಣೆಗಾಗಿ ಫೌಂಡೇಷನ್‌, ಸಮಂಜಸ ದತ್ತಾಂಶ ಭದ್ರತೆ ಮತ್ತು ಸುರಕ್ಷತಾ ಕ್ರಮಗಳನ್ನು ಬಳಸುತ್ತದೆ.

7. ಬಳಕೆದಾರರ ಹಕ್ಕುಗಳು

ಈ ವೆಬ್‌ಸೈಟ್‌ ಸಂಗ್ರಹಿಸಿದ ತಮ್ಮ ವೈಯಕ್ತಿಕ ಮಾಹಿತಿಯನ್ನು ತಲುಪಲು, ಮಾರ್ಪಡಿಸಲು ಮತ್ತು ಅಳಿಸಲು ಬಳಕೆದಾರರಿಗೆ ಹಕ್ಕಿದೆ.

ಈ ವೆಬ್‌ಸೈಟ್‌ ಸಂಗ್ರಹಿಸಿದ ತಮ್ಮ ವೈಯಕ್ತಿಕ ಮಾಹಿತಿಯ ಸಂಸ್ಕರಣೆಗೆ ತಾವು ನೀಡಿದ ಸಮ್ಮತಿಯನ್ನು ಹಿಂಪಡೆಯುವ ಹಕ್ಕನ್ನು ಸಹ ಬಳಕೆದಾರರು ಹೊಂದಿದ್ದಾರೆ.

ಬಳಕೆದಾರರು ತಮ್ಮ ವೈಯಕ್ತಿಕ ಮಾಹಿತಿಯನ್ನು ತಲುಪಲು, ಮಾರ್ಪಡಿಸಲು, ಅಳಿಸಲು ಹಾಗೂ ಅದರ ಸಂಸ್ಕರಣೆಗೆ ನೀಡಿದ ಸಮ್ಮತಿಯನ್ನು ಹಿಂಪಡೆಯುವ ತಮ್ಮ ಹಕ್ಕನ್ನು ಚಲಾಯಿಸಲು reachus@apu.edu.in ಮೂಲಕ ಸಂಪರ್ಕಿಸಬಹುದು.

8. ನೀತಿಯಲ್ಲಿ ಬದಲಾವಣೆ

ಕಾಲದಿಂದ ಕಾಲಕ್ಕೆ ಈ ನೀತಿಯನ್ನು ಪರಿಷ್ಕರಿಸುವ ಹಕ್ಕನ್ನು ಫೌಂಡೇಷನ್‌ ಕಾಯ್ದಿರಿಸಿದೆ. ಈ ವೆಬ್‌ಸೈಟ್‌ ಅನ್ನು ಬಳಸುವ ಮೂಲಕ ಹಾಗೂ ವೈಯಕ್ತಿಕ ಮಾಹಿತಿಯನ್ನು ಒದಗಿಸುವ ಮೂಲಕ, ಕಾಲದಿಂದ ಕಾಲಕ್ಕೆ ಪರಿಷ್ಕರಿಸಿದ ಈ ನೀತಿಯ ನಿಯಮಗಳಿಗೆ ನೀವು ಸಮ್ಮತಿ ಸೂಚಿಸಿರುತ್ತೀರಿ.

9. ಹಕ್ಕುತ್ಯಾಗ

ಈ ವೆಬ್‌ಸೈಟ್‌, ಫೌಂಡೇಷನ್‌ನ ಮಾಲೀಕತ್ವ ಅಥವಾ ಸಂಯೋಜನೆಯಲ್ಲಿರದ ಬಾಹ್ಯ ವೆಬ್‌ಸೈಟ್‌ಗಳ ಕೊಂಡಿಗಳನ್ನು ಹೊಂದಿರಬಹುದು. ಅಂತಹ ತೃತೀಯ ಪಕ್ಷದ ವೆಬ್‌ಸೈಟ್‌ಗಳಲ್ಲಿರುವ ವಿಷಯಗಳು ಅಥವಾ ಗೌಪ್ಯತಾ ನಿಯಮಗಳಿಗೆ ಫೌಂಡೇಷನ್‌ ಜವಾಬ್ದಾರಿ ಹೊರಲಾಗುವುದಿಲ್ಲ.

10. ಕುಂದುಕೊರತೆಗಳು

ಈ ನೀತಿಗೆ ಸಂಬಂಧಿಸಿದಂತೆ ನೀವು ಏನಾದರೂ ಕಾಳಜಿ ಅಥವಾ ಪ್ರಶ್ನೆಗಳನ್ನು ಹೊಂದಿದ್ದರೆ reachus@apu.edu.in ಇಮೇಲ್‌ ವಿಳಾಸಕ್ಕೆ ಅವುಗಳನ್ನು ಕಳುಹಿಸಬಹುದು.

© 2025 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
This site is registered on wpml.org as a development site. Switch to a production site key to remove this banner.