ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು
ಈ ವಿಭಾಗದಲ್ಲಿ ನಾವು ಫೌಂಡೇಷನ್‌ನಲ್ಲಿನ ಪಾತ್ರಗಳು, ಉದ್ಯೋಗಾವಕಾಶಗಳು ಮತ್ತು ಅರ್ಜಿಗಳು, ಸಂದರ್ಶನ ಪ್ರಕ್ರಿಯೆಗಳು, ವೇತನ ಮತ್ತು ಸೌಲಭ್ಯಗಳು ಮತ್ತು ಇತರ ಸಂಬಂಧಿತ ವಿಷಯಗಳ ಕುರಿತಾದ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತೇವೆ.
ನಾನು ಗ್ರಂಥಾಲಯದ ಸದಸ್ಯತ್ವವನ್ನು ಹೇಗೆ ಪಡೆಯಬಹುದು?
ಅಜೀಂ ಪ್ರೇಮ್‌ಜಿ ಫೌಂಡೇಷನ್‌ನ ಗ್ರಂಥಾಲಯಗಳು ಸಾರ್ವಜನಿಕರಿಗೆ ಉಚಿತ ಸದಸ್ಯತ್ವವನ್ನು ನೀಡುತ್ತವೆ. ಅದಕ್ಕಾಗಿ ದಯವಿಟ್ಟು ಫೌಂಡೇಷನ್‌ನ ಗ್ರಂಥಾಲಯಕ್ಕೆ ಭೇಟಿ ನೀಡಿ.
ನಾನು ಪುಸ್ತಕಗಳನ್ನು ಎರವಲು ಪಡೆಯಬಹುದೇ?
ನೀವು ಜಿಲ್ಲಾ ಸಂಸ್ಥೆಯ ಗ್ರಂಥಾಲಯಗಳಲ್ಲಿ ಪುಸ್ತಕಗಳನ್ನು ಎರವಲು ಪಡೆಯಬಹುದು. ಆದರೆ, ವಿಶ್ವವಿದ್ಯಾಲಯದ ಗ್ರಂಥಾಲಯಗಳಲ್ಲಿ ಎರವಲು ಪಡೆಯುವಂತಿಲ್ಲ.
ಗ್ರಂಥಾಲಯವು ಯಾವ ಸಮಯದಲ್ಲಿ ತೆಗೆದಿರುತ್ತದೆ?
ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ; ಫೌಂಡೇಷನ್‌ನ ರಜಾದಿನಗಳಲ್ಲಿ ಗ್ರಂಥಾಲಯವನ್ನು ಮುಚ್ಚಲಾಗುತ್ತದೆ.
ಗ್ರಂಥಾಲಯದಲ್ಲಿ ಲಭ್ಯವಿರುವ ಸಂಪನ್ಮೂಲಗಳ ಬಗ್ಗೆ ನಾನು ಹೇಗೆ ತಿಳಿದುಕೊಳ್ಳಬಹುದು?
ನಮ್ಮ ಗ್ರಂಥಾಲಯದಲ್ಲಿ ಇರುವ ಸಂಪನ್ಮೂಲಗಳ ಪೂರ್ಣಪಟ್ಟಿ ಇಲ್ಲಿದೆ: https://library.azimpremjiuniversity.edu.in
ನಾನು ಅಜೀಂ ಪ್ರೇಮ್‌ಜಿ ಫೌಂಡೇಷನ್‌ನ ಗ್ರಂಥಾಲಯವನ್ನು ಬಳಸಬಹುದೇ?
ಹೌದು, ಅಜೀಂ ಪ್ರೇಮ್‌ಜಿ ಫೌಂಡೇಷನ್‌ನ ಎಲ್ಲ ಗ್ರಂಥಾಲಯಗಳನ್ನು ಸಾರ್ವಜನಿಕರು ಉಚಿತವಾಗಿ ಬಳಸಬಹುದು.