ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು (ಎಫ್ಎಕ್ಯೂ)

FAQ

ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು

ಈ ವಿಭಾಗದಲ್ಲಿ ನಾವು ಫೌಂಡೇಷನ್‌ನಲ್ಲಿನ ಪಾತ್ರಗಳು, ಉದ್ಯೋಗಾವಕಾಶಗಳು ಮತ್ತು ಅರ್ಜಿಗಳು, ಸಂದರ್ಶನ ಪ್ರಕ್ರಿಯೆಗಳು, ವೇತನ ಮತ್ತು ಸೌಲಭ್ಯಗಳು ಮತ್ತು ಇತರ ಸಂಬಂಧಿತ ವಿಷಯಗಳ ಕುರಿತಾದ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತೇವೆ.

Filters
ಟ್ಯಾಗ್‌ಗಳು
  • ಮೊದಲು ಆಯ್ಕೆಮಾಡಿ ವರ್ಗ

ನಾನು ಗ್ರಂಥಾಲಯದ ಸದಸ್ಯತ್ವವನ್ನು ಹೇಗೆ ಪಡೆಯಬಹುದು?

ಅಜೀಂ ಪ್ರೇಮ್‌ಜಿ ಫೌಂಡೇಷನ್‌ನ ಗ್ರಂಥಾಲಯಗಳು ಸಾರ್ವಜನಿಕರಿಗೆ ಉಚಿತ ಸದಸ್ಯತ್ವವನ್ನು ನೀಡುತ್ತವೆ. ಅದಕ್ಕಾಗಿ ದಯವಿಟ್ಟು ಫೌಂಡೇಷನ್‌ನ ಗ್ರಂಥಾಲಯಕ್ಕೆ ಭೇಟಿ ನೀಡಿ.

ನಾನು ಪುಸ್ತಕಗಳನ್ನು ಎರವಲು ಪಡೆಯಬಹುದೇ?

ನೀವು ಜಿಲ್ಲಾ ಸಂಸ್ಥೆಯ ಗ್ರಂಥಾಲಯಗಳಲ್ಲಿ ಪುಸ್ತಕಗಳನ್ನು ಎರವಲು ಪಡೆಯಬಹುದು. ಆದರೆ, ವಿಶ್ವವಿದ್ಯಾಲಯದ ಗ್ರಂಥಾಲಯಗಳಲ್ಲಿ ಎರವಲು ಪಡೆಯುವಂತಿಲ್ಲ.

ಗ್ರಂಥಾಲಯವು ಯಾವ ಸಮಯದಲ್ಲಿ ತೆಗೆದಿರುತ್ತದೆ?

ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ; ಫೌಂಡೇಷನ್‌ನ ರಜಾದಿನಗಳಲ್ಲಿ ಗ್ರಂಥಾಲಯವನ್ನು ಮುಚ್ಚಲಾಗುತ್ತದೆ.

ಗ್ರಂಥಾಲಯದಲ್ಲಿ ಲಭ್ಯವಿರುವ ಸಂಪನ್ಮೂಲಗಳ ಬಗ್ಗೆ ನಾನು ಹೇಗೆ ತಿಳಿದುಕೊಳ್ಳಬಹುದು?

ನಮ್ಮ ಗ್ರಂಥಾಲಯದಲ್ಲಿ ಇರುವ ಸಂಪನ್ಮೂಲಗಳ ಪೂರ್ಣಪಟ್ಟಿ ಇಲ್ಲಿದೆ:  https://library.azimpremjiuniversity.edu.in 

ನನ್ನ ಅರ್ಜಿಯನ್ನು ಸ್ವೀಕರಿಸಲಾಗಿದೆಯೇ ಎಂದು ನನಗೆ ಹೇಗೆ ತಿಳಿಯುತ್ತದೆ?

ನೀವು ಯಾವ ಈಮೇಲ್‌ಗೆ (facultypositions@apu.edu.in ಅಥವಾ openpositions@apu.edu.in) ನಿಮ್ಮ ಅರ್ಜಿಯನ್ನು ಕಳಿಸಿದ್ದೀರೋ ಅಲ್ಲಿಂದ ನಿಮಗೆ  ನಿಮ್ಮ ಅರ್ಜಿ ಸ್ವೀಕೃತಿಯನ್ನು ಖಚಿತಡಿಸುವ ಒಂದು ಈಮೇಲ್‌ ಬರುತ್ತದೆ.

ನನ್ನ ಅರ್ಜಿಯ ಯಾವ ಹಂತದಲ್ಲಿದೆ ಎನ್ನುವ ಕುರಿತು ನೀವು ನನ್ನನ್ನು ಸಂಪರ್ಕಿಸುವಿರಾ?

ಪರಿಶೀಲನಾ ತಂಡದಿಂದ ರ್ಜಿಗೆ ಸಂಬಂಧಿಸಿದಂತೆ ಮಾಹಿತಿ ಬಂದಾ, ಪ್ರಕ್ರಿಯೆಯ ಮುಂದಿನ ಹಂತಗಳ ಕುರಿತು ಮಾಹಿತಿಯನ್ನು ನೀಡಲು ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ. ನೀವು ನಿಮ್ಮ ಅರ್ಜಿಯ ಬಗ್ಗೆ ವಿಚಾರಿಸಲು ಬಯಸಿದರೆ, ನೀವು ಅರ್ಜಿ ಸಲ್ಲಿಸಿದ ಇಮೇಲ್ ಐಡಿಗೆ ನಿಮ್ಮ ಪ್ರಶ್ನೆಗಳನ್ನು ಕಳುಹಿಸಬಹುದು. ತದನಂತರ ನಿಮ್ಮ ಅರ್ಜಿಯ ಕುರಿತು ನಾವು ನಿಮಗೆ ತಿಳಿಸುತ್ತೇವೆ. 

ಸಂದರ್ಶನ ಪ್ರಕ್ರಿಯೆ ಹೇಗಿರುತ್ತದೆ ಮತ್ತು ನಾನು ಹೇಗೆ ತಯಾರಾಗಬಹುದು?

ಬೋಧ ಮತ್ತು ಬೋಧಕೇತರ ಪಾತ್ರಗಳಿಗೆ ಸಂದರ್ಶನ ಪ್ರಕ್ರಿಯೆಯು ಭಿನ್ನವಾಗಿರುತ್ತದೆ. ನಿಮ್ಮ ಅರ್ಜಿಯು ಮುಂದಿನ ಹಂತಕ್ಕೆ ಹೋಗಿದ್ದರೆ, ಪ್ರಕ್ರಿಯೆಯ ಕುರಿತು ನಿಮಗೆ ತಿಳಿಸಲಾಗುವುದು.
ಯಾವುದೇ ಉದ್ಯೋಗಾವಕಾಶದ ಪ್ರಕಟಣೆ ಕುರಿತ ಮಾಹಿತಿಗಾಗಿ ನೀವು ವಿಶ್ವವಿದ್ಯಾಲಯದ ಉದ್ಯೋಗಾವಕಾಶಗಳ ಪ್ರಕಟಣೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಬಹುದು (https://azimpremjiuniversity.edu.in/jobs). ಪ್ರತಿಯೊಂದು ಉದ್ಯೋಗಾವಕಾಶದ ಪ್ರಕಟಣೆಯೂ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸ್ಪಷ್ಟವಾಗಿ ವಿವರಿಸುತ್ತದೆ. ಜೊತೆಗೆ, ಕೆಲಸದ ಸ್ಥಳ, ಕೆಲಸದ ಬಗೆ, ಪಾತ್ರ, ಪ್ರಾವೀಣ್ಯತೆಯ ಕ್ಷೇತ್ರ, ಕೆಲಸದ ವಿವರಣೆ ಮತ್ತು ಅವಶ್ಯಕತೆಗಳು, ಮತ್ತು ಅವಶ್ಯವಿರುವ ದಾಖಲೆಗಳನ್ನೂ ಕೂಡ ನಮೂದಿಸಲಾಗಿರುತ್ತದೆ.  ತದನಂತರ ಕೊಟ್ಟಿರುವ ಇಮೇಲ್ ಐಡಿಗೆ ನೀವು ಅಗತ್ಯ ದಾಖಲೆಗಳನ್ನು ಕಳುಹಿಸಿದರೆ, ಅದನ್ನು ತಂಡವು ಪರಿಶೀಲಿಸುತ್ತದೆ.

ನಾನು ಯಾವ ಸ್ಥಾನಕ್ಕೆ ನನ್ನ ರೆಸ್ಯೂಮೆಯನ್ನು ಸಲ್ಲಿಸಿರುತ್ತೇನೋ ಆ ಸ್ಥಾನವನ್ನು ಹೊರತುಪಡಿಸಿ ಬೇರೆ ಸ್ಥಾನಗಳಿಗೆ ನನ್ನನ್ನು ಪರಿಗಣಿಸಬಹುದೇ?

ನೀವು ಅರ್ಜಿಯನ್ನು ಸಲ್ಲಿಸಿದ ನಂತರ, ನಿಮ್ಮ ರೆಸ್ಯೂಮೆ ಮತ್ತು ದಾಖಲೆಗಳನ್ನು ನೀವು ಅರ್ಜಿ ಸಲ್ಲಿಸಿದ ಸ್ಥಾನಕ್ಕೆ ಮತ್ತು ನೀವು ಸೂಕ್ತವಾಗಿರಬಹುದಾದಂತಹ ಇತರ ಸ್ಥಾನಗಳನ್ನೂ ಗಮನದಲ್ಲಿ ಇಟ್ಟುಕೊಂಡು ಪರಿಶೀಲಿಸಲಾಗುತ್ತದೆ. ನೀವು ಅರ್ಜಿ ಸಲ್ಲಿಸಿದ ಪಾತ್ರಕ್ಕೆ ಹೊರತಾಗಿ ಬೇರೆ ಪಾತ್ರಕ್ಕೆ ಹೆಚ್ಚು ಸೂಕ್ತರಾಗಿದ್ದರೆ, ನಾವು ಅದನ್ನು ನಿಮಗೆ ತಿಳಿಸುತ್ತೇವೆ. ನೀವು ಮುಂದುವರಿಸಲು ಬಯಸಿದರೆ, ನಾವು ನಿಮ್ಮ ಅರ್ಜಿಯನ್ನು ಮುಂದಿನ ಹಂತಕ್ಕೆ ಪರಿಗಣಿಸಿ, ನಿಮ್ಮ ಅರ್ಜಿಯ ಪ್ರಗತಿಯ ಕುರಿತಾದ ಮಾಹಿತಿಯೊಂದಿಗೆ ನಿಮ್ಮನ್ನು ಸಂಪರ್ಕಿಸುತ್ತೇವೆ. 

ನನ್ನ ರೆಸ್ಯೂಮೆ/ಅರ್ಜಿಯನ್ನು ಸಲ್ಲಿಸಲು ನನಗೆ ತೊಂದರೆಯಾದರೆ ನಾನು ಯಾರನ್ನು ಸಂಪರ್ಕಿಸಬಹುದು?

ನಿಮ್ಮ ಅರ್ಜಿ ಸಲ್ಲಿಕೆಗೆ ಸಂಬಂಧಿಸಿದಂತೆ ನೀವು ಯಾವುದೇ ತೊಂದರೆಯನ್ನು ಅನುಭವಿಸಿದರೆ, ದಯವಿಟ್ಟು facultypositions@apu.edu.in ಅಥವಾ openpositions@apu.edu.in  ಇಲ್ಲಿಗೆ ಬರೆಯಿರಿ.

ಹೊಸ ಉದ್ಯೋಗಾವಕಾಶಗಳ ಪ್ರಕಟಣೆಯ ಬಗ್ಗೆ ನನಗೆ ತನ್ನಷ್ಟಕ್ಕೆ ತಾನೆ ಸೂಚನೆ ಬರುವಂತೆ ಮಾಡಿಕೊಳ್ಳಬಹುದೇ?

ಈಗ ಲಭ್ಯವಿರುವ ಉದ್ಯೊಗಾವಕಾಶಗಳ ಬಗ್ಗೆ ಮಾಹಿತಿ ಪಡೆಯಲು ನೀವು ನಮ್ಮ ಉದ್ಯೋಗ ಪ್ರಕಟಣೆಯ ಪುಟವನ್ನು (https://azimpremjiuniversity.edu.in/jobs) ನೋಡಬಹುದು. ಹೊಸ ಉದ್ಯೋಗಾವಕಾಶಗಳ ಬಗ್ಗೆ ನಿಮಗೇ ನೇರವಾಗಿ ಸೂಚನೆ ಕಳಿಸುವಂತಹ ಸೌಲಭ್ಯ ಸದ್ಯಕ್ಕೆ ಇಲ್ಲ. Grants/ ಅನುದಾನ 

ನಾನು ಹಲವು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದೇ?

ಹೌದು, ನೀವು ಹಲವು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು; ದರೆ, ನಿಮ್ಮ ಸಂಬಂಧಿತ ಅನುಭವದ ಆಧಾರದ ಮೇಲೆ ನಿಮ್ಮ ಅರ್ಜಿಯನ್ನು ಪರಿಗಣಿಸಲಾಗುವುದು. 

ಪ್ರಕಟವಾಗಿಲ್ಲದ ಹುದ್ದೆಗೆ ನಾನು ಹೇಗೆ ಅರ್ಜಿ ಸಲ್ಲಿಸಬಹುದು?

ನಿಮ್ಮ ರೆಸ್ಯೂಮೆಯನ್ನು ನೀವು jobs.philanthropy@azimpremjifoundation.org   ಗೆ ಕಳಿಸಬಹುದು. ನಿಮಗೆ ಅನ್ವಯವಾಗುವ ಸೂಕ್ತವಾದ ಪಾತ್ರಕ್ಕೆ ನಿಮ್ಮನ್ನು ಪರಿಗಣಿಸಲಾಗುವುದು.

ನಾನು ಅರ್ಜಿಯನ್ನು ಸಲ್ಲಿಸಿದ ನಂತರ ಏನಾಗುತ್ತದೆ?

ನಿಮ್ಮ ರ್ಜಿಗೆ ಸಂಬಂಧಿಸಿದಂತೆ ಪರಿಶೀಲನಾ ತಂಡದಿಂದ ಮಾಹಿತಿ ಬಂದಾಗ, ಪ್ರಕ್ರಿಯೆಯ ಮುಂದಿನ ಹಂತಗಳ ಕುರಿತು ನಾವು ನಿಮಗೆ ತಿಳಿಸುತ್ತೇವೆ. 

ನಮ್ಮ ಉದ್ಯೋಗದ ಸ್ಥಳಗಳು ಯಾವುವು?

ಉದ್ಯೋಗ ಸ್ಥಳದ ವಿವರಗಳಿಗಾಗಿ ದಯವಿಟ್ಟು ವೃತ್ತಿ ಪುಟದಲ್ಲಿನ ಉದ್ಯೋಗ-ಸಂಬಂಧಿ ವಿವರಣೆಯನ್ನು ಒಮ್ಮೆ ಓದಿ.  

ನೀವು ಮನೆ/ಹೊರಗಿನಿಂದ ಕೆಲಸ ಮಾಡುವ ಅವಕಾಶ ನೀಡುತ್ತೀರಾ?

ನಾವು ಮನೆ/ಹೊರಗಿನಿಂದ ಕೆಲಸ ಮಾಡುವ ಅವಕಾಶ ನೀಡುವುದಿಲ್ಲ. 

ಉದ್ಯೋಗ ನಿಮಿತ್ತ ಆಗಾಗ್ಗೆ ಪ್ರಯಾಣ ಮಾಡಬೇಕಾಗುತ್ತದೆಯೇ?

ಲೋಕೋಪಕಾರ ಘಟಕದಲ್ಲಿ ಬಹಳಷ್ಟು ಪಾತ್ರಗಳಲ್ಲಿ ವ್ಯಾಪಕ ಪ್ರಯಾಣದ ಅಗತ್ಯವಿರುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಸಂಬಂಧಿತ ಉದ್ಯೋಗ ವಿವರಣೆಯನ್ನು ನೋಡಿ. 

ಸಂಸ್ಥೆಯಲ್ಲಿ ಇಂಟರ್ನ್‌ಶಿಪ್ ಅವಕಾಶಗಳಿವೆಯೇ?

ಪ್ರಸ್ತುತ ಲೋಕೋಪಕಾರ ಘಟಕದಲ್ಲಿ ಯಾವುದೇ ಇಂಟರ್ನ್‌ಶಿಪ್ ಅವಕಾಶಗಳಿಲ್ಲ. 

ಪಟ್ಟಿ ಮಾಡಲಾದ ಮತ್ತೊಂದು ಸ್ಥಾನಕ್ಕೆ ಪುನಃ ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ಪ್ರಕ್ರಿಯೆ ಯಾವುದು?

ನೀವು ಯಾವುದೇ ಸ್ಥಾನಕ್ಕೆ ಈ ಹಿಂದೆ ಅರ್ಜಿ ಸಲ್ಲಿಸಿದ್ದು, ಅದು ಯಾವುದಾದರೂ ಒಂದು ಹಂತದಿಂದ ಮುಂದುವರೆಯದಿದ್ದರೆ, ಒಂದು ವರ್ಷದ ಅವಧಿಯ ಕಾಯುವಿಕೆಯ ನಂತರ ನೀವು ಮರು ಅರ್ಜಿ ಸಲ್ಲಿಸಬಹುದು

ಉದ್ಯೋಗಾವಕಾಶಗಳ ಕುರಿತ ಇತ್ತೀಚಿನ ಮಾಹಿತಿಯನ್ನು ನಾನು ಹೇಗೆ ಪಡೆಯಬಹುದು?

ಉದ್ಯೋಗಾವಕಾಶಗಳನ್ನು ಕಾಲಕಾಲಕ್ಕೆ ನಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. 

ನಾನು ಯಾವ ರೀತಿಯ ಅನುಭವಗಳನ್ನು ಪಡೆಯಬಹುದು?

ನೀವು ಶಾಲೆ ಮತ್ತು ಸಮುದಾಯದ ಕುರಿತಾಗಿ ನಿಮ್ಮ ಅನುಭವವನ್ನು ರೂಪಿಸಿಕೊಂಡು ಶಿಕ್ಷಣ ಕ್ಷೇತ್ರದ ಈ ಕೆಳಗಿನ ಆಯಾಮಗಳಿಗೆ ತೆರೆದುಕೊಳ್ಳುತೀರಿ.    

  • ತರಗತಿಯಲ್ಲಿ ಪಾಠ ಮಾಡುವುದು ಮತ್ತು ಕಲಿಯುವುದು. 
  • ಶಾಲೆ / ಹಳ್ಳಿಯ ಮಟ್ಟದಿಂದ ಪ್ರಾರಂಭಿಸಿ ಮೇಲಿನ ಹಂತಗಳನ್ನು ಗಮನಿಸುವ ಮೂಲಕ ಶಿಕ್ಷಣ ಕ್ಷೇತ್ರವನ್ನು ಅರ್ಥಮಾಡಿಕೊಳ್ಳುವುದು. 
  • ಶಾಲೆಯನ್ನು ಒಂದು ವ್ಯವಸ್ಥೆಯ ಭಾಗವಾಗಿ ನೋಡಿ, ಅದರ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುವ ವ್ಯವಸ್ಥೆಗೆ ಸಂಬಂಧಿಸಿದ ಅಂಶಗಳನ್ನು ಅರ್ಥಮಾಡಿಕೊಳ್ಳುವುದು 
  • ಶಾಲೆಯು ಸಮುದಾಯ ಮತ್ತು ಸ್ಥಳೀಯ ಆಡಳಿತದೊಂದಿಗೆ ಹೊಂದಿರುವ ಅಂತರ್-ಸಂಬಂಧಗಳನ್ನು ಅರ್ಥಮಾಡಿಕೊಳ್ಳುವುದು. 
  • ಶಿಕ್ಷಣ ವ್ಯವಸ್ಥೆಯ ಆಡಳಿತ, ಆಡಳಿತ ಸಂರಚನೆಗಳನ್ನು ಅರ್ಥಮಾಡಿಕೊಳ್ಳುವುದು. ಮತ್ತು ರಾಜ್ಯ/ಜಿಲ್ಲೆಯ ವಿವಿಧ ಇಲಾಖೆಗಳೊಂದಿಗೆ ಕೆಲಸ ಮಾಡುವುದು. 
  • ಅಭ್ಯಾಸದಲ್ಲಿ ತೊಡಗಿರುವ ಶಿಕ್ಷಕರ ವೃತ್ತಿಪರ ಅಭಿವೃದ್ಧಿಗೆ ವ್ಯವಸ್ಥಿತವಾದ ಪ್ರಕ್ರಿಯೆಯ ಅಗತ್ಯವನ್ನು ಅರ್ಥಮಾಡಿಕೊಳ್ಳುವುದು, ಮತ್ತು ಶಿಕ್ಷಕರ ವೃತ್ತಿಪರ ಅಭಿವೃದ್ಧಿ ಮತ್ತು ಬೆಂಬಲಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಭಾಗವಹಿಸುವುದು. 

ಆರಂಭಿಕ ಪರಿಚಯ (ಓರಿಯೆಂಟೇಶನ್) ಇರುತ್ತದೆಯೇ?

ಹೌದು, ಭಿಕ ಹಂತದ ಪರಿಚಯ ಇರುತ್ತದೆ. ಅಸೋಸಿಯೇಟ್ಳು ರಿ ಒಂದು ತಿಂಗಳ ನಂತರ ಇದನು ಮಾಡಲಾಗು್ತದೆ.

ನಾನು ಎಲ್ಲಿ ಕೆಲಸ ಮಾಡುತ್ತೇನೆ?

ಈ ಕೆಳಗಿನ ರಾಜ್ಯಗಳಲ್ಲಿರುವ ನಮ್ಮ ಜಿಲ್ಲಾ ಸಂಸ್ಥೆಗಳ ಆಯ್ದ ಬ್ಲಾಕ್‌ಗಳಲ್ಲಿ ನೀವು ಕೆಲಸ ಮಾಡುತ್ತೀರಿ:

ಛತ್ತೀಸ್‌ಗಡ

ಕರ್ನಾಟಕ

ಮಧ್ಯಪ್ರದೇಶ

ರಾಜಸ್ಥಾನ

ಉತ್ತರಾಖಂಡ

ನಾನು ಗ್ರಾಮೀಣ ಭಾರತದಲ್ಲಿ ಕೆಲಸ ಮಾಡುತ್ತಿರುವುದರಿಂದ, ಸ್ಥಳೀಯ ಭಾಷೆಯನ್ನು ತಿಳಿದುಕೊಳ್ಳಬೇಕೇ?

ಹೌದು, ಸ್ಥಳೀಯ ಭಾಷೆಯಲ್ಲಿ ಓದಲು ಮತ್ತು ಬರೆಯಲು ತಿಳಿದಿರುವುದು ಬಹಳ ಮುಖ್ಯ. ಉದಾಹರಣೆಗೆ, ನೀವು ಸಿರೋಹಿ ಜಿಲ್ಲಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರೆ, ನೀವು ಹಿಂದಿಯಲ್ಲಿ ಓದಲು, ಬರೆಯಲು ಮತ್ತು ಮಾತನಾಡಲು ತಿಳಿದಿರಬೇಕು. 

ಜಿಲ್ಲಾ ಸಂಸ್ಥೆಯಲ್ಲಿ ನನಗೆ ವಸತಿ ಸೌಕರ್ಯವನ್ನು ನೀಡಲಾಗುವುದೇ? ನಾನು ಅದನ್ನು ಹೇಗೆ ಹುಡುಕಬೇಕು?

ಫೌಂಡೇಷನ್‌ನ ವತಿಯಿಂದ ಯಾವುದೇ ವಸತಿ ಸೌಕರ್ಯವನ್ನು ಒದಗಿಸುವುದಿಲ್ಲ. ನೀವು ಬ್ಲಾಕ್ ಪ್ರದೇಶಕ್ಕೆ ತೆರಳಿದ ನಂತರ, ನಿಮಗೆ 10-14 ದಿನಗಳ ಕಾಲ ವಸತಿ ಸೌಕರ್ಯವನ್ನು ಒದಗಿಸಲಾಗುತ್ತದೆ. ತದನಂತರ ನೀವು ನಿಮ್ಮ ಸ್ವಂತ ವಸತಿ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಮನೆ ಹುಡುಕಲು ಜಿಲ್ಲಾ ಸಂಸ್ಥೆಯಲ್ಲಿನ ಸದಸ್ಯರು ನಿಮಗೆ ಸಹಾಯ ಮಾಡುತ್ತಾರೆ. 

ನನಗೆ ನೀಡುವ ವೇತನ ಮತ್ತು ಸವಲತ್ತುಗಳ ಸ್ವರೂಪವೇನು?

ನಿಮಗೆ ರೂ. 36,000/- ಮಾಸಿಕ ವೇತನವನ್ನು ನೀಡಲಾಗುತ್ತದೆ. (ತೆರಿಗೆಗಳು ಮತ್ತು ಕಾನೂನಾತ್ಮವಾದ ಕಡಿತಗಳು ಅನ್ವಯಿಸುತ್ತವೆ). ವೇತನ ಜೊತೆಗೆ, ನಿಮಗೆ ಆರೋಗ್ಯ, ಜೀವ ಮತ್ತು ಅಪಘಾತ ವಿಮೆಯಂತಹ ವಿವಿಧ ವಿಮೆಗಳನ್ನು ಸಹ ನೀಡಲಾಗುತ್ತದೆ. ಇದರ ಜೊತೆಗೆ, ಅಸೋಸಿಯೇಟ್‌ಗಳು ಸ್ಥಳಾಂತರ ಮತ್ತು ವಸತಿ ಠೇವಣಿ ನೆರವಿನಂತಹ ಭತ್ಯೆಗಳಿಗೆ ಅರ್ಹರಾಗಿರುತ್ತಾರೆ (ಸಂಸ್ಥೆಯ ನೀತಿಯಂತೆ). 

ನನ್ನ ಕೆಲಸದ ಮೊದಲ ವರ್ಷದಲ್ಲಿ ನಾನು ಯಾವ ರೀತಿಯ ಬೆಂಬಲವನ್ನು ಪಡೆಯುತ್ತೇನೆ?

ನನ್ನ ಕೆಲಸದ ಮೊದಲ ವರ್ಷದಲ್ಲಿ ನಾನು ಯಾವ ರೀತಿಯ ಬೆಂಬಲವನ್ನು ಪಡೆಯುತ್ತೇನೆ? 

ಸೇವೆಗೆ ಸೇರುವ ದಿನಾಂಕಗಳು ಯಾವುವು?

ಆಗಸ್ಟ್  2024

ಹೆಚ್ಚಿನ ಮಾಹಿತಿಗಾಗಿ ನಾನು ಯಾರನ್ನು ಸಂಪರ್ಕಿಸಬೇಕು?

ಯಾವುದೇ ಹೆಚ್ಚಿನ ಮಾಹಿತಿಗಾಗಿ ನೀವು associate.rp@azimpremjifoundation.org ಗೆ ಬರೆಯಬಹುದ

ನಾನು ಅಜೀಂ ಪ್ರೇಮ್‌ಜಿ ಫೌಂಡೇಷನ್‌ನ ಗ್ರಂಥಾಲಯವನ್ನು ಬಳಸಬಹುದೇ?

ಹೌದು, ಅಜೀಂ ಪ್ರೇಮ್‌ಜಿ ಫೌಂಡೇಷನ್‌ನ ಎಲ್ಲ ಗ್ರಂಥಾಲಯಗಳನ್ನು ಸಾರ್ವಜನಿಕರು ಉಚಿತವಾಗಿ ಬಳಸಬಹುದು.

ನನ್ನ ರೆಸ್ಯೂಮೆ/ಅರ್ಜಿಯನ್ನು ಸಲ್ಲಿಸಲು ನನಗೆ ತೊಂದರೆಯಾದರೆ ನಾನು ಯಾರನ್ನು ಸಂಪರ್ಕಿಸಬಹುದು?

ನಿಮ್ಮ ಅರ್ಜಿ ಸಲ್ಲಿಕೆಗೆ ಸಂಬಂಧಿಸಿದಂತೆ ನೀವು ಯಾವುದೇ ತೊಂದರೆಯನ್ನು ಅನುಭವಿಸಿದರೆ, ದಯವಿಟ್ಟು facultypositions@apu.edu.in ಅಥವಾ openpositions@apu.edu.in  ಇಲ್ಲಿಗೆ ಬರೆಯಿರಿ.

ಸಂಸ್ಥೆಯಲ್ಲಿ ಇಂಟರ್ನ್‌ಶಿಪ್ ಅವಕಾಶಗಳಿವೆಯೇ?

ಪ್ರಸ್ತುತ ಲೋಕೋಪಕಾರ ಘಟಕದಲ್ಲಿ ಯಾವುದೇ ಇಂಟರ್ನ್‌ಶಿಪ್ ಅವಕಾಶಗಳಿಲ್ಲ.

ಪ್ರಶ್ನೆ: ಪಟ್ಟಿ ಮಾಡಲಾದ ಮತ್ತೊಂದು ಸ್ಥಾನಕ್ಕೆ ಪುನಃ ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ಪ್ರಕ್ರಿಯೆ ಯಾವುದು?

ನೀವು ಯಾವುದೇ ಸ್ಥಾನಕ್ಕೆ ಈ ಹಿಂದೆ ಅರ್ಜಿ ಸಲ್ಲಿಸಿದ್ದು, ಅದು ಯಾವುದಾದರೂ ಒಂದು ಹಂತದಿಂದ ಮುಂದುವರೆಯದಿದ್ದರೆ, ಒಂದು ವರ್ಷದ ಅವಧಿಯ ಕಾಯುವಿಕೆಯ ನಂತರ ನೀವು ಮರು ಅರ್ಜಿ ಸಲ್ಲಿಸಬಹುದು. ನಿಮ್ಮ ಅರ್ಜಿಗೆ ಸಂಬಂಧಿಸಿದಂತೆ ನಿಮಗೆ ಯಾವುದೇ ಈಮೇಲ್ಬಂದಿಲ್ಲದಿದ್ದರೆ, ನೀವು  ಪುನಃ ಅರ್ಜಿ ಸಲ್ಲಿಸಬಹುದು. 

ಪ್ರಕಟವಾಗಿಲ್ಲದ ಹುದ್ದೆಗೆ ನಾನು ಹೇಗೆ ಅರ್ಜಿ ಸಲ್ಲಿಸಬಹುದು?

ೀವು ನಿಮ್ಮ ರೆಸ್ಯೂಮೆಯನ್ನು facultypositions@apu.edu.in ಅಥವಾ openpositions@apu.edu.in, ಇಲ್ಲಿಗೆ ಕಳುಹಿಸಬಹುದು. ಅದನ್ನು ಯಾವುದೇ ಸೂಕ್ತ ಸ್ಥಾನಕ್ಕೆ ಪರಿಶೀಲಿಸಲಾಗುತ್ತದೆ. 

ನಿಮ್ಮ ಪ್ರಶ್ನೆಗೆ ನೀವಿಲ್ಲಿ ಉತ್ತರವನ್ನು ಕಾಣದಿದ್ದಲ್ಲಿ, ಕೆಳಗಿನ ಕೊಂಡಿಗಳ ಮೂಲಕ ನಮ್ಮನ್ನು ದಯವಿಟ್ಟು ಸಂಪರ್ಕಿಸಿ.

© 2025 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
This site is registered on wpml.org as a development site. Switch to a production site key to remove this banner.