ಲಿಂಗತ್ವ ನ್ಯಾಯ

genderjustice

ಭಾರತದ ಕೆಲವು ಅತ್ಯಂತ ದುರ್ಬಲ ಹೆಣ್ಣುಮಕ್ಕಳು, ಮಹಿಳೆಯರು ಹಾಗೂ ತೃತೀಯ ಲಿಂಗ ಮತ್ತು ಲೈಂಗಿಕ ಅಲ್ಪಸಂಖ್ಯಾತರೊಂದಿಗೆ ಕೆಲಸ ಮಾಡುತ್ತಿರುವ 170 ಕ್ಕೂ ಹೆಚ್ಚು ಸಂಸ್ಥೆಗಳಿಗೆ ನಾವು ನೆರವು ನೀಡುತ್ತೇವೆ

ಹದಿಹರೆಯದ ಹೆಣ್ಣುಮಕ್ಕಳೊಂದಿಗೆ ಕೆಲಸ ಮಾಡುತ್ತಾ ಅವರಲ್ಲಿ ಲಿಂಗತ್ವದ ಬಗ್ಗೆ ತಿಳುವಳಿಕೆಯನ್ನು ಬೆಳೆಸುವ, ಮತ್ತು ಮಹತ್ವದ ಜೀವನ ಕೌಶಲ್ಯಗಳನ್ನು ತಿಳಿಸುವ, ಅಥವಾ ಲಿಂಗ-ಆಧರಿತ ಹಿಂಸಾಚಾರವನ್ನು ತಡೆಗಟ್ಟುವಲ್ಲಿ ಮಹಿಳೆಯರಿಗೆ ಬೆಂಬಲವನ್ನು ನೀಡುವಂತಹ ಪಾಲುದಾರರನ್ನು ಹುಡುಕುವತ್ತ ನಾವು ಗಮನಹರಿಸುತ್ತೇವೆ. ಹೆಣ್ಣುಮಕ್ಕಳು, ಮಹಿಳೆಯರು ಮತ್ತು ಲಿಂಗ ಮತ್ತು ಲೈಂಗಿಕ ಅಲ್ಪಸಂಖ್ಯಾತ ಸದಸ್ಯರಿಗೆ ತಮ್ಮ ಹಕ್ಕುಗಳು ದೊರೆಯುವಂತೆ ಮಾಡುವ ಸಂಸ್ಥೆಗಳೊಂದಿಗೆ ಸಹ ನಾವು ಸಹಯೋಗದಲ್ಲಿ ಕೆಲಸ ಮಾಡುತ್ತೇವೆ.

ಅಂತಹ ಎಲ್ಲ ಗುಂಪುಗಳು ಮತ್ತು ಸಮುದಾಯಗಳು, ಅವರ ವಾಸ್ತವ ಬದುಕಿನ ನಿರ್ಬಂಧಗಳಿಂದ ಮುಕ್ತವಾದ ಭವಿ಼ಷ್ಯವನ್ನು ರೂಪಿಸಿಕೊಳ್ಳುವಂತೆ ಮಾಡುವುದೇ ಈ ಎಲ್ಲ ಕೆಲಸಗಳ ಅಂತಿಮ ಗುರಿಯಾಗಿದೆ.

ಈ ಕ್ಷೇತ್ರದಲ್ಲಿನ ನಮ್ಮ ಕೆಲಸಕ್ಕೆ ಸಹಭಾಗಿತ್ವ ಮುಖ್ಯವಾಗುತ್ತದೆ. ಹುಡುಗಿಯರು ಮತ್ತು ಮಹಿಳೆಯರಿಗಾಗಿ ಕೆಲಸ ಮಾಡುವ ಹದಿಹರೆಯದವರ ಗುಂಪುಗಳು/ಸಮುದಾಯಗಳು ಒಟ್ಟಾಗಿ ಸೇರಿ ಕಲಿಯಲು, ತಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಒಗ್ಗಟ್ಟಿನಿಂದ ಪರಿಹಾರ ಕಂಡುಕೊಳ್ಳಲು ಮತ್ತು ಬದಲಾವಣೆಗಾಗಿ ವಕಾಲತ್ತು ವಹಿಸಲು ಬೆಂಬಲ ನೀಡುತ್ತೇವೆ. ಪರಿಣಾಮವಾಗಿ ಇದು ಹೆಣ್ಣುಮಕ್ಕಳು ಮತ್ತು ಮಹಿಳೆಯರು ಹಿಂಸೆಯ ಪರಿಸ್ಥಿತಿಯನ್ನು ಎದುರಿಸಲು ಬಿಕ್ಕಟ್ಟಿನ ಸಮಯದಲ್ಲಿ ಮಧ್ಯಸ್ಥಿಕೆಯ ನೆರವು ಪಡೆಯುವುದು, ಆಪ್ತಸಮಾಲೋಚನೆ, ಆಶ್ರಯ, ಆರೋಗ್ಯ ಸೇವೆಗಳು ಮತ್ತು ಆರ್ಥಿಕ ಪರಿಹಾರಗಳಂತಹ ನೆರವುಗಳನ್ನೊಳಗೊಂಡ ಪ್ರತಿಸ್ಪಂದನೆಯ ಕಾರ್ಯವಿಧಾನಗಳನ್ನು ಬಲಪಡಿಸುತ್ತದೆ.

genderjustice

ನಮ್ಮ ಪಾಲುದಾರರು ತಳಸ್ತರದಲ್ಲಿ ಮಾಡುತ್ತಿರುವ ಕೆಲಸದಿಂದ ಸಮುಚ್ಚಯಗಳು ರಚನೆಯಾಗಿದ್ದು, ಅವು ಹೆಣ್ಣುಮಕ್ಕಳಿಗೆ ತಾರತಮ್ಯದ ವಿರುದ್ಧ ಹೋರಾಡಲು ಕರ್ತೃತ್ತ್ವತೆಯನ್ನು ಒದಗಿಸುತ್ತವೆ; ಸಮುದಾಯದಲ್ಲಿನ ಪ್ರಯತ್ನಗಳನ್ನು ಮುಂದುವರೆಸಲು ಹದಿಹರೆಯದ ಹುಡುಗಿಯರನ್ನೊಳಗೊಂಡ ಸಹವರ್ತಿ ನಾಯಕರ ತಂಡ ರೂಪುಗೊಂಡಿದೆ.

ನಾವು ಬೆಂಬಲಿಸುವ ಹದಿಹರೆಯದ ಹೆಣ್ಣುಮಕ್ಕಳ ಗುಂಪುಗಳ ಸಹವರ್ತಿ ನಾಯಕರ ಶಿಕ್ಷಣಕ್ಕಾಗಿ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು ಕೋರ್ಸುಗಳನ್ನು ನಡೆಸುತ್ತದೆ. ಪಾಲುದಾರ ಸಂಸ್ಥೆಗಳ ಮೂಲಕ ನಮ್ಮ ವಿಶ್ವವಿದ್ಯಾಲಯದಲ್ಲಿ ಹೆಣ್ಣುಮಕ್ಕಳಿಗಾಗಿ ಪದವಿ ಮತ್ತು ಸ್ನಾತಕೋತ್ತರ ಕಾರ್ಯಕ್ರಮಗಳಿಗೆ ಪ್ರವೇಶಾತಿ ಪಡೆಯಲು ನೆರವಾಗಿದ್ದೇವೆ.

ನಮ್ಮ ಪಾಲುದಾರರು ಸಂರಚನಾತ್ಮಕ ಪ್ರಕರಣ ಕಾರ್ಯ/ಪ್ರಕರಣ ನಿರ್ವಹಣೆ ಮೂಲಕ ಹಿಂಸಾಚಾರಕ್ಕೊಳಗಾದ ಸಂತ್ರಸ್ತರಿಗೆ ಕಾನೂನು ನೆರವನ್ನು ಕೂಡ ನೀಡುತ್ತಾರೆ. ಇದು ಹಿಂಸಾಚಾರದಿಂದ ಬಳಲಿದ ಸಂತ್ರಸ್ತರು ಸರ್ಕಾರದಿಂದ ಪರಿಹಾರವನ್ನು ಪಡೆಯಲು ಮತ್ತು ಔಪಚಾರಿಕವಾಗಿ ಆದಾಯ ಗಳಿಕೆಯನ್ನು ಆರಂಭಿಸಲು ಸಹಾಯ ಮಾಡಿದೆ.

ನಮ್ಮ ಕೆಲಸವು ಲಿಂಗ ಮತ್ತು ಲೈಂಗಿಕ ಅಲ್ಪಸಂಖ್ಯಾತರಿಗೆ ಅವರ ಮೂಲಭೂತ ಹಕ್ಕುಗಳು, ಆಶ್ರಯ, ಆರೋಗ್ಯ, ಕಾನೂನು ನೆರವು ಮತ್ತು ಜೀವನೋಪಾಯದ ಅವಕಾಶಗಳಿಗೆ ಅವಕಾಶವನ್ನು ಒದಗಿಸುವ ಮೂಲಕ ಅವರ ಹಕ್ಕುಗಳು ಮತ್ತು ಯೋಗಕ್ಷೇಮಕ್ಕೆ ಒತ್ತು ನೀಡುತ್ತದೆ.

ಲಿಂಗತ್ವ ನ್ಯಾಯವು ಪೊಲೀಸ್, ಪಂಚಾಯತ್, ಮಕ್ಕಳ ಕಲ್ಯಾಣ ಅಧಿಕಾರಿಗಳು ಮತ್ತು ಸಮುದಾಯದ ಮುಖಂಡರಂತಹ ಸಂಬಂಧಪಟ್ಟ ಭಾಗೀದಾರರೊಂದಿಗೆ ವ್ಯಾಪಕವಾಗಿ ತೊಡಗಿಸಿಕೊಳ್ಳಬೇಕಾದ ಅಗತ್ಯ ಕ್ಷೇತ್ರವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಅನುಷ್ಠಾನವನ್ನು ಬಲಪಡಿಸಲು ನಾವು ಬ್ಲಾಕ್ ಮತ್ತು ಜಿಲ್ಲಾ ಮಟ್ಟದಲ್ಲಿ ಸರ್ಕಾರಿ ಅಧಿಕಾರಿಗಳೊಂದಿಗೆ ಸಹ ಸಹಯೋಗದಲ್ಲಿ ಕೆಲಸ ಮಾಡುತ್ತೇವೆ.

ಲಿಂಗತ್ವ ನ್ಯಾಯ ಕ್ಷೇತ್ರದಲ್ಲಿ ನಾವು ನಮ್ಮ ಸಹವರ್ತಿಗಳೊಂದಿಗೆ ಕೆಲಸ ಮಾಡುತ್ತೇವೆ.

© 2025 अजीम प्रेमजी फाउंडेशन. सर्वाधिकार सुरक्षित।
© 2025 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
This site is registered on wpml.org as a development site. Switch to a production site key to remove this banner.