ಕಲೆ ಮತ್ತು ಸಂಸ್ಕೃತಿ

artandculture

ನಮ್ಮ ಕಲೆ ಮತ್ತು ಸಂಸ್ಕೃತಿಯ ಕಾರ್ಯ ವಿಭಾಗವು ಫೌಂಡೇಷನ್ ನ ಉದ್ದೇಶವನ್ನು ಕಥನಗಳ ಮೂಲಕ ಅಭಿವ್ಯಕ್ತಿಸುತ್ತದೆ

ಕಥೆ ಹೇಳುವಿಕೆಯು ಸಾಮಾಜಿಕ ಧೋರಣೆಗಳು ಮತ್ತು ನಂಬಿಕೆಗಳಲ್ಲಿ ಅರ್ಥಪೂರ್ಣ ಬದಲಾವಣೆಯನ್ನು ತರುವ ಶಕ್ತಿಯನ್ನು ಹೊಂದಿದೆ ಮತ್ತು ನಮ್ಮ ಕೆಲಸಗಳು, ನಮ್ಮ ಮೈಲಿಗಲ್ಲುಗಳು, ನಮ್ಮ ಕಲಿಕೆ ಮತ್ತು ಆಕಾಂಕ್ಷೆಗಳನ್ನು ಕುರಿತಾದ ಕಥನಗಳನ್ನು ರೇಡಿಯೋ ಮತ್ತು ಪಾಡ್ ಕ್ಯಾಸ್ಟ್ ಗಳ ಮೂಲಕ, ಕಲೆ, ಸಂಗೀತ, ಸಾಕ್ಷ್ಯಚಿತ್ರ ಮತ್ತು ಸಚಿತ್ರ ಕಥೆ ಪುಸ್ತಕಗಳ ಮೂಲಕ ಪ್ರಸ್ತುತ ಪಡಿಸುತ್ತೇವೆ.

artandcultrue
artandculture

ನ್ಯಾಯಯುತ, ಸಮಾನ, ಮಾನವೀಯ ಮತ್ತು ಸುಸ್ಥಿರ ಸಮಾಜವೊಂದರ ನಿರ್ಮಾಣದ ಕುರಿತಾದ ಫೌಂಡೇಷನ್‌ನ ಕಾಣ್ಕೆಯನ್ನು ಸಂವಾದಗಳ ಮೂಲಕ ಮುನ್ನೆಲೆಗೆ ತಂದು ನಾವು ಸಾರ್ವಜನಿಕ ತಿಳುವಳಿಕೆ ಹೆಚ್ಚಾಗುವಂತೆ ಮಾಡುತ್ತೇವೆ. ನಮ್ಮ ಹತ್ತಿರದ ಸಮುದಾಯಗಳಿಂದ ಹಿಡಿದು ಭಾರತದ ಜನತೆಯನ್ನೊಳಗೊಂಡಂತೆ ನಾವು ಎಲ್ಲರಿಗೂ ಕೂಡ ಸಕಾಲಿಕವಾದ, ಅವಶ್ಯಕವಾದ ಮತ್ತು ಪ್ರಸ್ತುತವಾದ ಕಥನಗಳನ್ನು ನಿರ್ಮಿಸುತ್ತೇವೆ, ಬೆಂಬಲಿಸುತ್ತೇವೆ ಮತ್ತು ಹಂಚಿಕೊಳ್ಳುತ್ತೇವೆ.

ಕಲೆ ಮತ್ತು ಸಂಸ್ಕೃತಿಯ ಅಡಿಯಲ್ಲಿ ನಾವು ಕೈಗೊಂಡಿರುವ ಉಪಕ್ರಮಗಳ ಇಣುಕು ನೋಟ ಇಲ್ಲಿದೆ.

ಕ್ಯಾಂಪಸ್ ನಲ್ಲಿ ಕಲೆ

ಭಾರತದ ವೈವಿಧ್ಯತೆ ಮತ್ತು ಬಹುತ್ವವನ್ನು ಅದರ ಕಲಾತ್ಮಕ ಸಂಪ್ರದಾಯಗಳು ಹಿಡಿದಿಡುತ್ತವೆ. ಆದರೆ ಸಮಕಾಲೀನ ಕಲೆಯಂತೆ ಅಲ್ಲದೆ ಜಾನಪದ ಕಲಾ ಪ್ರಕಾರಗಳು ಬಹುತೇಕ ಬಾರಿ ನಗರ ಪ್ರದೇಶದಿಂದ ದೂರವಾಗಿರುತ್ತದೆ ಅಥವಾ ಸಂಬಂಧವನ್ನು ಕಳೆದುಕೊಂಡಿರುತ್ತದೆ. ನಾವು ಕ್ಯಾಂಪಸ್ ನ ಗೋಡೆ ಚಿತ್ರಗಳ ಮೂಲಕ ಈ ಕಂದರವನ್ನು ಕಡಮೆ ಮಾಡಲು ಪ್ರಯತ್ನಿಸುತ್ತೇವೆ. ಸೆಮಿನಾರ್ ಹಾಲ್ ಗಳು ಮತ್ತು ವಿದ್ಯಾರ್ಥಿ ನಿಲಯಗಳು ಸೇರಿದಂತೆ ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸಮಾನ ಬಳಕೆಯ ಆವರಣಗಳು ಕಲಾತ್ಮಕ ಅಭಿವ್ಯಕ್ತಿಯ ತಾಣಗಳಾಗಿವೆ.

art-on-campus

2022 ಮತ್ತು 2023ರಲ್ಲಿ ಆರಂಭಿಸಲಾದ ಎರಡು ಕ್ಯಾಂಪಸ್ ಗೋಡೆ ಚಿತ್ರಗಳ ಅನಾವರಣದ ಮೂಲಕ ನಾವು ಸಾಂಪ್ರದಾಯಿಕ ಮತ್ತು ಸಮಕಾಲೀನ ಕಲಾವಿದರ ನಡುವೆ ಸಹಯೋಗ ಏರ್ಪಡುವಂತೆ ಮಾಡಿದ್ದೇವೆ. ಅವರು ರಚಿಸಿದ ಗೋಡೆ ಚಿತ್ರಗಳು ಭಾರತದ ವೈವಿಧ್ಯತೆ ಮತ್ತು ಬಹುತ್ವದ ಸೌಹಾರ್ದತೆಯನ್ನು ಬಿಂಬಿಸುತ್ತವೆ ಮತ್ತು ಜೊತೆಗೆ ಇವು ಸಾಂವಿಧಾನಿಕ ಮೌಲ್ಯಗಳ ಬಲವಾದ ಅಭಿವ್ಯಕ್ತಿಯೂ ಆಗಿವೆ. ಬೆಂಗಳೂರಿನ ನಮ್ಮ ಆರೋಗ್ಯ ಕೇಂದ್ರದ ಗೋಡೆಗಳ ಮೇಲೆಯೂ ಸಹ ಗೋಡೆ ಚಿತ್ರಗಳನ್ನು ರಚಿಸಲಾಗಿದೆ.

ರೇಡಿಯೋ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ

ಸಾರ್ವಜನಿಕ ಕೇಳುಗ ವೃಂದಕ್ಕೆ ಚಿಂತನಶೀಲ, ಸೂಕ್ಷ್ಮವಾದ ಮತ್ತು ಪ್ರಸ್ತುತವಾದ ರೇಡಿಯೋ ಕಾರ್ಯಕ್ರಮಗಳನ್ನು ಒದಗಿಸಲು ನಮ್ಮ ಅಂತರ್ಜಾಲ ರೇಡಿಯೋ ನಿಲ್ದಾಣವಾದ, ರೇಡಿಯೋ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿಯು ವಿದ್ಯಾರ್ಥಿಗಳ, ಅಧ್ಯಾಪಕರ ಮತ್ತು ತಜ್ಞರ ಶಕ್ತಿ, ಕೌಶಲ್ಯ ಮತ್ತು ಸೃಜನಾತ್ಮಕ ಅಭಿವ್ಯಕ್ತಿಯನ್ನು ಉಪಯೋಗಿಸಿಕೊಳ್ಳುತ್ತದೆ. ಅಂತರ್ಜಾಲ ರೇಡಿಯೋಗೆ ಬರೆಯಲು, ಸಂಕಲನ ಮಾಡಲು ಮತ್ತು ಕಾರ್ಯಕ್ರಮ ನಿರ್ಮಾಣ ಮಾಡಲು ವಿಭಿನ್ನ ವಿಭಾಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದಕ್ಕಾಗಿಯೆ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಸೈನ್ಸಸ್ ಆಶ್ರಯದಲ್ಲಿ ರೇಡಿಯೋ ಶಾಲಾ ಎಂಬ ಮುಕ್ತ ಆಯ್ಕೆಯ ಕೋರ್ಸ್ ಒಂದನ್ನು 2023ರ ಆಗಸ್ಟ್ ನಲ್ಲಿ ಆರಂಭಿಸಲಾಯಿತು.

Radio Azim Premji University
© 2025 अजीम प्रेमजी फाउंडेशन. सर्वाधिकार सुरक्षित।
© 2025 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
This site is registered on wpml.org as a development site. Switch to a production site key to remove this banner.