ಭೂಮಿ ಮತ್ತು ಅರಣ್ಯ

other area land_forest

ಭೂಮಿ ಮತ್ತು ಅರಣ್ಯಕ್ಕೆ ಸಂಬಂಧಿಸಿದ ನಮ್ಮ ಕೆಲಸವನ್ನು ಆದಿವಾಸಿ ಮತ್ತು ಗ್ರಾಮೀಣ ಜೀವನೋಪಾಯಗಳು ಎಂಬ ಎರಡು ವಿಶಾಲ ಕ್ಷೇತ್ರಗಳಾಗಿ ವಿಂಗಡಿಸಲಾಗಿದೆ

ಆದಿವಾಸಿ ಕ್ಷೇತ್ರದಲ್ಲಿ, ಆದಿವಾಸಿ ಸಮುದಾಯಗಳಲ್ಲಿ ವೈಯಕ್ತಿಕ ಮತ್ತು ಸಾಮುದಾಯಿಕ ಅರಣ್ಯ ಹಕ್ಕುಗಳ ಅರಿವು ಮೂಡಿಸುತ್ತಿರುವ, ಅವರ ಪಶುಪಾಲನೆಯ ಹಕ್ಕುಗಳನ್ನು ಖಚಿತಪಡಿಸುತ್ತಿರುವ, ಅವರಿಗೆ ಆರೋಗ್ಯ, ಇತರ ಮೂಲಭೂತ ಸೇವೆಗಳು ಮತ್ತು ಅವರಿಗಾಗಿ ಇರುವ ಯೋಜನೆಗಳು ಮತ್ತು ಸೌಲಭ್ಯಗಳ ಲಭ್ಯತೆಯನ್ನು ಉತ್ತಮಗೊಳಿಸಲು ಪ್ರಯತ್ನಿಸುತ್ತಿರುವ ಸಂಸ್ಥೆಗಳನ್ನು ನಾವು ಬೆಂಬಲಿಸುತ್ತೇವೆ.

ಈ ನಿಟ್ಟಿನಲ್ಲಿ, ದೇಶಾದ್ಯಂತ ಅತ್ಯಂತ ದುರ್ಬಲ ಆದಿವಾಸಿ ಸಮುದಾಯಗಳೊಂದಿಗೆ ಕೆಲಸ ಮಾಡುತ್ತಿರುವ 50 ಕ್ಕೂ ಹೆಚ್ಚು ಸಂಸ್ಥೆಗಳನ್ನು ನಾವು ಬೆಂಬಲಿಸುತ್ತೇವೆ.

ನಮ್ಮ ಪಾಲುದಾರರ ಕೆಲಸವು ತಳಸ್ತರದಲ್ಲಿ ಸಕಾರಾತ್ಮಕ ಬದಲಾವಣೆಗಳಿಗೆ ಕಾರಣವಾಗಿದೆ. ಸಮುದಾಯ ಅರಣ್ಯ ಹಕ್ಕು ಮತ್ತು ವೈಯಕ್ತಿಕ ಅರಣ್ಯ ಹಕ್ಕುಗಳನ್ನು ಪಡೆಯಲು ಸಲ್ಲಿಸಿದ ಅರ್ಜಿಗಳು ಮತ್ತು ಸ್ವೀಕರಿಸಿದ ಹಕ್ಕುಪತ್ರಗಳ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿದೆ. ಸಮುದಾಯ ಅರಣ್ಯ ಸಂಪನ್ಮೂಲ ಸಂರಕ್ಷಣೆ ಮತ್ತು ನಿರ್ವಹಣಾ ಯೋಜನೆಗಳ ತಯಾರಿ ಮತ್ತು ಪ್ರಸಕ್ತ ಅನುಷ್ಠಾನದಲ್ಲಿ ನಮ್ಮ ಪಾಲುದಾರರು ನೆರವು ನೀಡಿದ್ದಾರೆ.

landforest

ಚಿತ್ರ ಕೃಪೆ – ಪುರುಷೋತ್ತಮ್‌ ಠಾಕೂರ್‌

ನಮ್ಮ ಪಾಲುದಾರರ ವಿಸ್ತೃತವಾದ ಕಾರ್ಯಚಟುವಟಿಕೆಗಳು, ʼಪರಿಶಿಷ್ಟ ಪ್ರದೇಶಗಳಿಗೆ ಪಂಚಾಯತ್‌ಗಳ ವಿಸ್ತರಣೆ ಕಾಯ್ದೆʼಯ ಅನುಷ್ಠಾನದ ಮೂಲಕ ಸ್ಥಳೀಯ ಆಡಳಿತ ವ್ಯವಸ್ಥೆಯನ್ನು ಬಲಪಡಿಸಿದೆ. ಪ್ರಸ್ತುತ ಗ್ರಾಮ ಸಭೆಗಳು ಆಗಾಗ್ಗೆ ನಡೆಯುತ್ತಿದ್ದು, ಸಮುದಾಯದ ಭಾಗವಹಿಸುವಿಕೆಯ ಪ್ರಮಾಣವು ಹೆಚ್ಚಾಗಿದೆ.

ಅವರು ಆದಿವಾಸಿ ಸಮುದಾಯಗಳಿಗೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗಳಾದ
ಪಡಿತರ ಚೀಟಿಗಳು, ಪಿಂಚಣಿಗಳು, ಜಾತಿ ಪ್ರಮಾಣಪತ್ರಗಳು ಮತ್ತು ವಿದ್ಯಾರ್ಥಿವೇತನಗಳು ಸಿಗುವಂತೆ ಮಾಡಿದ್ದಾರೆ. ಅಲ್ಲದೆ, ಸೌದೆ ಅಲ್ಲದ ಇತರ ಅರಣ್ಯ ಉತ್ಪನ್ನಗಳ ಮಾರಾಟ, ಕೃಷಿ ಮತ್ತು ಮನರೇಗಾ ಮೂಲಕ ಕುಟುಂಬದ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡಿದ್ದಾರೆ.

ಆದಿವಾಸಿ ಕುಟುಂಬಗಳ ಆರೋಗ್ಯ ಮತ್ತು ಪೌಷ್ಟಿಕಾಂಶದ ಸ್ಥಿತಿಯನ್ನು ಸುಧಾರಿಸುವುದು ನಮ್ಮ ಪಾಲುದಾರರ ಕೆಲಸದ ಮತ್ತೊಂದು ಪ್ರಮುಖ ಕ್ಷೇತ್ರವಾಗಿದೆ. ಉತ್ತಮ ಆರೋಗ್ಯ ಸೌಲಭ್ಯಗಳು ದೊರೆಯುವುದರಿಂದ ಈ ಕೆಲವು ಬದಲಾವಣೆಗಳಾಗಿವೆ: ಅತಿ ತೀವ್ರ ಮತ್ತು ಮಧ್ಯಮ ಮಟ್ಟದ ತೀವ್ರತೆಯ ಅಪೌಷ್ಟಿಕತೆಯನ್ನು ಹೊಂದಿರುವ ಮಕ್ಕಳ ಸಂಖ್ಯೆ, ಹೆರಿಗೆಯ ಸಮಯದಲ್ಲಿ ಮಗು ಮತ್ತು ತಾಯಿಯ ಸಾವಿನ ಘಟನೆಗಳು ಮತ್ತು ಗರ್ಭಿಣಿ ಮಹಿಳೆಯರಲ್ಲಿನ ರಕ್ತಹೀನತೆಯ ಪ್ರಮಾಣಗಳು ಕಡಿಮೆಯಾಗಿವೆ.

ಗ್ರಾಮೀಣ ಜೀವನೋಪಾಯವು ಭೂಮಿ ಮತ್ತು ಅರಣ್ಯಕ್ಕೆ ಸಂಬಂಧಿಸದ ನಮ್ಮ ಕೆಲಸಗಳಲ್ಲಿ ಮತ್ತೊಂದು ಪ್ರಮುಖ ಕ್ಷೇತ್ರವಾಗಿದೆ. ದೇಶದಾದ್ಯಂತ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅತ್ಯಂತ ದುರ್ಬಲವಾಗಿರುವ ಸಣ್ಣ ಮತ್ತು ಅತಿಸಣ್ಣ ರೈತರು, ಮಾರಾಟಗಾರರು, ಕುಶಲಕರ್ಮಿಗಳು ಮತ್ತು ನೇಕಾರರೊಂದಿಗೆ ಕೆಲಸ ಮಾಡುತ್ತಿರುವ 50ಕ್ಕೂ ಹೆಚ್ಚು ಸಂಸ್ಥೆಗಳನ್ನು ನಾವು ಬೆಂಬಲಿಸುತ್ತೇವೆ.

ಕಡಿಮೆ ಆದಾಯ, ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳ ಕಡಿಮೆ ಉತ್ಪಾದಕತೆ, ಮಾರುಕಟ್ಟೆ, ಸಾಲ, ಸರ್ಕಾರಿ ಯೋಜನೆಗಳು ಮತ್ತು ಸೇವೆಗಳು ಸುಲಭವಾಗಿ ದೊರಕದಿರುವುದು, ಜೀವನೋಪಾಯದ ಸವಾಲುಗಳನ್ನು ಉಲ್ಬಣಗೊಳಿಸುವ ನೈಸರ್ಗಿಕ ಸಂಪನ್ಮೂಲಗಳ ಅವನತಿ ಮತ್ತು ಭೂರಹಿತ ಕುಟುಂಬಗಳ ಉತ್ಪಾದಕ ಆಸ್ತಿಗಳ ಕೊರತೆಯಂತಹ ಸಮಸ್ಯೆಗಳನ್ನು ಪರಿಹರಿಸುವ ನಾಗರಿಕ ಸಮಾಜದ ಸಂಸ್ಥೆಗಳನ್ನು ಬೆಂಬಲಿಸುತ್ತೇವೆ.

ತಮ್ಮ ಕೆಲಸದ ಮೂಲಕ, ನಮ್ಮ ಪಾಲುದಾರರು ತಳಸ್ತರದಲ್ಲಿ ಹಲವು ಸಕಾರಾತ್ಮಕ ಬದಲಾವಣೆಗಳನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆ.

ಅವುಗಳಲ್ಲಿ ಪ್ರಮುಖವಾದುವೆಂದರೆ, ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ ಹೆಚ್ಚಾಗಿ ಉತ್ತಮ ಅಭ್ಯಾಸಗಳ ಅಳವಡಿಕೆ, ಮಾರುಕಟ್ಟೆಯಲ್ಲಿ ಮಾರಲು ಹೆಚ್ಚಿನ ಅವಕಾಶಗಳೊಂದಿಗೆ ಕೃಷಿ ವೆಚ್ಚದಲ್ಲಿ ಕಡಿತ, ಕೃಷಿ ಭೂಮಿಗಳ ಉತ್ಪಾದಕತೆಯ ಹೆಚ್ಚಳ, ಗ್ರಾಮೀಣ ಸಂಸ್ಥೆಗಳು ಮತ್ತು ರೈತ ಸಮೂಹಗಳ ಬಲವರ್ಧನೆ ಹಾಗೂ ವಾಣಿಜ್ಯ ಬೆಳೆಗಳು ಮತ್ತು ಜಾನುವಾರುಗಳಿಂದ ಹೆಚ್ಚಿನ ಮತ್ತು ವೈವಿಧ್ಯಮಯ ಆದಾಯ. ಒಟ್ಟಾರೆಯಾಗಿ, ಇವುಗಳು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ಗ್ರಾಮೀಣ ಕುಟುಂಬಗಳ ಸ್ಥಿತಿಯನ್ನು ಸುಧಾರಿಸಿವೆ.

ಆಡಳಿತ ಕ್ಷೇತ್ರದಲ್ಲಿ ನಾವು ನಮ್ಮ ಸಹವರ್ತಿಗಳೊಂದಿಗೆ ಕೆಲಸ ಮಾಡುತ್ತೇವೆ.

© 2025 अजीम प्रेमजी फाउंडेशन. सर्वाधिकार सुरक्षित।
© 2025 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
This site is registered on wpml.org as a development site. Switch to a production site key to remove this banner.