ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು ಸಾಮಾಜಿಕ ಬದಲಾವಣೆಯ ಕುರಿತಾದ ಫೌಂಡೇಷನ್‌ನ ಕಾಣ್ಕೆಯ ಅವಿಭಾಜ್ಯ ಅಂಗವಾಗಿದೆ
ದೇಶದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು, ವಿಶೇಷವಾಗಿ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿನ ಸಂಸ್ಥೆಗಳ ಮೂಲಕ ಸುಧಾರಿಸಿ ಬದಲಾಯಿಸಬೇಕು ಎಂಬ ಉದ್ದೇಶದಿಂದ ಪ್ರಾರಂಭವಾದ ಏಕಧ್ಯೇಯ ಪ್ರಯತ್ನವು, 2010ರಲ್ಲಿ ಬೆಂಗಳೂರಿನಲ್ಲಿ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸ್ಥಾಪನೆಗೆ ಎಡೆಮಾಡಿಕೊಟ್ಟಿತು.
ಈ ಉನ್ನತ ಶಿಕ್ಷಣ ಕೇಂದ್ರದ ಮೂಲವು, ಅನೇಕ ವರ್ಷಗಳ ಕಾಲ ನಾವು ಮಾಡಿದ್ದ ವಿಸ್ತಾರವಾದ ತಳಸ್ತರದ ಕೆಲಸದಲ್ಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ಇರುವ ಅರ್ಹತೆಯುಳ್ಳ ಮತ್ತು ಜ್ಞಾನವುಳ್ಳ ವೃತ್ತಿಪರರ ಕೊರತೆಯು, ಶಿಕ್ಷಣ ಮತ್ತು ಸಂಬಂಧಿತ ಮಾನವ ಅಭಿವೃದ್ಧಿ ಮತ್ತು ಯೋಗಕ್ಷೇಮ ಕ್ಷೇತ್ರಗಳಲ್ಲಿ ವೃತ್ತಿಮಾರ್ಗವನ್ನು ಕಂಡುಕೊಳ್ಳುವಂತೆ ಯುವ ಮನಸ್ಸುಗಳನ್ನು ರೂಪಿಸುವ ವಿಶ್ವವಿದ್ಯಾನಿಲಯವೊಂದರ ಅಗತ್ಯತೆಯನ್ನು ತೋರಿಸಿತು.
ಭೋಪಾಲ್ ನಲ್ಲಿ ಇರುವ ನಮ್ಮ ಎರಡನೆಯ ವಿಶ್ವವಿದ್ಯಾಲಯದ ಕ್ಯಾಂಪಸ್ 2023ರಲ್ಲಿ ಪ್ರಾರಂಭವಾಯಿತು.







ಯುವ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಲ್ಲದೆ, ವಿಶ್ವವಿದ್ಯಾಲಯದಲ್ಲಿ ಶಿಕ್ಷಕರು, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದ ಅಧಿಕಾರಿಗಳು ಮತ್ತು ಇತರ ವೃತ್ತಿಪರರು, ಆರಂಭಿಕ ಮಕ್ಕಳ ಶಿಕ್ಷಣ, ಸಮನ್ವಯ ಶಿಕ್ಷಣ ಮತ್ತು ಸಾಮಾಜಿಕ ಕ್ರಿಯೆಗಾಗಿ ಸಂಶೋಧನೆ ಮುಂತಾದ ವಿಷಯಗಳಲ್ಲಿ, ಡಿಪ್ಲೊಮೊ ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳ ಮೂಲಕ ಕಲಿಯುತ್ತಿದ್ದಾರೆ.