ನೀತಿ ನೆರವು

policysupport

ಒಳ್ಳೆಯ ಕಲಿಕೆ ಮತ್ತು ಬೋಧನಾ ಫಲಿತಾಂಶಗಳು ಉತ್ತಮ ಶಿಕ್ಷಣ ವ್ಯವಸ್ಥೆಯ ಕೇಂದ್ರಬಿಂದು ಎನಿಸಿವೆ

ಹೀಗಾಗಿಯೇ ಅಜೀಂ ಪ್ರೇಮ್‌ಜಿ ಫೌಂಡೇಷನ್‌ನಲ್ಲಿ ನಾವು ದೇಶದ ಸಾರ್ವಜನಿಕ ಶಾಲೆಗಳ ಮಟ್ಟ ಮತ್ತು ದಕ್ಷತೆಯ ಸುಧಾರಣೆಗೆ ಕೊಡುಗೆಯನ್ನು ನೀಡುತ್ತಿದ್ದೇವೆ. ಈ ಕ್ಷೇತ್ರದಲ್ಲಿ ನಾವು ಹೊಂದಿರುವ ಪರಿಣಾಮಕಾರಿಯಾದಬಲವಾದ ಉಪಸ್ಥಿತಿಯಿಂದಾಗಿ ನಾವು ಗಳಿಸಿದ ಮೌಲ್ಯಯುತ ಒಳನೋಟ ಮತ್ತು ಜ್ಞಾನದ ಮೂಲಕ ನಮ್ಮ ಆಶಯವನ್ನು ಬಲಪಡಿಸುತ್ತಿದ್ದೇವೆ. ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ, ನಮ್ಮ ಫಲಿತಾಂಶಗಳು ಮತ್ತು ಅನುಭವಗಳು ಶಾಲಾ ಶಿಕ್ಷಣದಲ್ಲಿ ಅರ್ಥಪೂರ್ಣ ನೀತಿ ಬದಲಾವಣೆಗೆ ಪ್ರೇರಣೆಯನ್ನು ನೀಡುತ್ತಿವೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳೊಂದಿಗಿನ ನಮ್ಮ ಸಹಯೋಗವು, ನೀತಿ ಕರಡು ರಚನೆ, ಪಠ್ಯಕ್ರಮ ಮತ್ತು ಪಠ್ಯಪುಸ್ತಕದ ಅಭಿವೃದ್ಧಿ ಮತ್ತು ವಿನ್ಯಾಸ, ಮೌಲ್ಯಾಂಕದಲ್ಲಿನ ಸುಧಾರಣೆ, ಹಿರಿಯ ಅಧಿಕಾರಿಗಳ ಸಾಮರ್ಥ್ಯ ವೃದ್ಧಿ ಮತ್ತು ಸಾಂಸ್ಥಿಕ ಸುಧಾರಣೆ ಮುಂತಾದ ಕ್ಷೇತ್ರಗಳಲ್ಲಿ ಫೌಂಡೇಷನ್‌ ಅನ್ನು ಸಕ್ರಿಯ ಪಾಲುದಾರನನ್ನಾಗಿ ರೂಪಿಸಿದೆ.

PolicySupport
ಕೇಂದ್ರ ಸರ್ಕಾರದೊಂದಿಗೆ ಕೆಲಸ ಮಾಡುವುದು

ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌.ಇ.ಪಿ) 2020 ಮತ್ತು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (2022) ಇವೆರಡಕ್ಕೆ ನಾವು ನೀಡಿರುವ ಕೊಡುಗೆಯು ಭಾರತ ಸರ್ಕಾರದೊಂದಿಗಿನ ನಮ್ಮ ಪ್ರಸ್ತುತ ಸಹಯೋಗದಲ್ಲಿ ಪ್ರಮುಖ ಮೈಲಿಗಲ್ಲು ಎನಿಸಿದೆ. ಎನ್‌.ಸಿ.ಎಫ್‌ ಅನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ನಮ್ಮ ತಂಡಗಳು ಪ್ರಮುಖ ಪಾತ್ರವನ್ನು ವಹಿಸಿದೆ. ಈ ಚೌಕಟ್ಟು, ಭಾರತದ ಎಲ್ಲಾ 15 ಲಕ್ಷ ಸಾರ್ವಜನಿಕ ಮತ್ತು ಖಾಸಗಿ ಶಾಲೆಗಳಲ್ಲಿ ಮುಂದಿನ 15-20 ವರ್ಷಗಳಲ್ಲಿ ಬೋಧನೆ ಮತ್ತು ಕಲಿಕೆಯ ಹಿಂದಿನ ಚಾಲಕ ಶಕ್ತಿ ಎನಿಸಲಿದೆ. ಎಲ್ಲಾ ರಾಷ್ಟ್ರೀಯ ಮತ್ತು ರಾಜ್ಯ ಮಂಡಳಿಗಳ ಪಠ್ಯಕ್ರಮಗಳು, ಪಠ್ಯಪುಸ್ತಕಗಳು ಮತ್ತು ಪರೀಕ್ಷೆಗಳಲ್ಲಿನ ಬದಲಾವಣೆಗಳಿಗೆ ಈ ಎನ್‌.ಸಿ.ಎಫ್‌ ಆಧಾರವೆನಿಸಲಿದೆ.

ಬೋಧನೆ – ಕಲಿಕೆ ಸಾಮಗ್ರಿಗಳ (ಟಿ.ಎಲ್‌.ಎಂ ಗಳ) ಮೂಲಮಾದರಿ ಎನಿಸಿರುವ ʻಜಾದುಯಿ ಪಿಟಾರಾʼ ಎನ್ನುವುದು ಎನ್‌.ಸಿ.ಎಫ್‌ ನ ಅಂಗವೆನಿಸಿದ್ದು, ನಮ್ಮ ಸಹಯೋಗಿಗಳ ಜತೆಗೂಡಿ ನಾವಿದನ್ನು ಅಭಿವೃದ್ಧಿಪಡಿಸಿದ್ದೇವೆ. ಆಟಿಕೆಗಳು, ಆಟಗಳು, ಚಕ್ರಬಂಧ ಸಮಸ್ಯೆಗಳು, ಗೊಂಬೆಗಳು, ಭಿತ್ತಿಪತ್ರಗಳು ಮತ್ತು ಪ್ಲೇಬುಕ್‌ಗಳ ರೂಪದಲ್ಲಿರುವ ಈ ಟಿ.ಎಲ್‌.ಎಂ ಗಳು 3ರಿಂದ 8 ವರ್ಷ ವಯಸ್ಸಿನ ಮಕ್ಕಳ ಆಟ ಆಧರಿತ ಕಲಿಕೆಗೆ ನೆರವು ನೀಡುವ ನಿಟ್ಟಿನಲ್ಲಿ ಉಪಯುಕ್ತ ಎನಿಸಿವೆ. ಈ ಕಿಟ್‌, ಶಿಕ್ಷಕರಿಗಾಗಿ ಕೈಪಿಡಿಯೊಂದನ್ನು ಹೊಂದಿದ್ದು, ಬುನಾದಿ ಹಂತಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (ಎನ್‌.ಸಿ.ಎಫ್‌-ಎಫ್‌.ಎಸ್‌) 2022 – ಇದರ ಅಡಿಯಲ್ಲಿ ಪಠ್ಯಕ್ರಮದ ವಿವಿಧ ಗುರಿಗಳನ್ನು ಸಾಧಿಸಲು ಇದು ಅವರಿಗೆ ಸಹಾಯ ಮಾಡಲಿದೆ.

ರಾಜ್ಯ ಸರ್ಕಾರಗಳೊಂದಿಗೆ ಕೆಲಸ ಮಾಡುವುದು

ಮುಂದುವರಿಕೆ ಶಿಕ್ಷಣ ಶಾಲೆ (School of Continuing Education) ಮತ್ತು ವಿಶ್ವವಿದ್ಯಾಲಯ ಸಂಶೋಧನಾ ಕೇಂದ್ರದ (ಎಸ್‌.ಸಿ.ಇ – ಯು.ಆರ್‌.ಸಿ) ನಮ್ಮ ಕ್ಷೇತ್ರ ತಂಡಗಳು, ಭಾರತದ 17 ರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದು, ವಿವಿಧ ಕ್ಷೇತ್ರಗಳಲ್ಲಿ ಮತ್ತು ಅನೇಕ ಗುರಿ ಗುಂಪುಗಳೊಂದಿಗೆ ಈ ರಾಜ್ಯಗಳ ಸರ್ಕಾರಗಳಿಗೆ ನೆರವನ್ನು ಒದಗಿಸುತ್ತಿವೆ.

ಪಠ್ಯಕ್ರಮ ಚೌಕಟ್ಟುಗಳು ಮತ್ತು ಪೊಸಿಷನ್ ಪೇಪರ (position papers) ಅಭಿವೃದ್ಧಿಯಲ್ಲಿ ನೀತಿಗಳ ಹಂತದ ಕೆಲಸದೊಂದಿಗೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ (ಎನ್‌.ಇ.ಪಿ) ಸುಧಾರಣೆಗಳನ್ನು ಜಾರಿಗೊಳಿಸುವ ಕೆಲಸದಲ್ಲಿ ನಾವು ನಿಕಟವಾಗಿ ತೊಡಗಿಸಿಕೊಂಡಿದ್ದೇವೆ. ಈ ನಿಟ್ಟಿನಲ್ಲಿ ನಾವು ಒಳಗೊಂಡಿರುವ ಕೆಲಸಗಳೆಂದರೆ: ಈಶಾನ್ಯ ಭಾರತದ ಎಲ್ಲಾ ಎಂಟು ರಾಜ್ಯಗಳಲ್ಲಿ ಶೈಕ್ಷಣಿಕ ಸಾಮಗ್ರಿಯ ಅಭಿವೃದ್ಧಿ, ಶಿಕ್ಷಕರು ಮತ್ತು ಶಿಕ್ಷಕ ಬೋಧಕರ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವುದು, ರಾಜ್ಯ ಮಂಡಳಿ ಪರೀಕ್ಷೆಗಳಲ್ಲಿ ಸುಧಾರಣೆ ಮತ್ತು ಶಿಕ್ಷಕ ಅರ್ಹತೆ ಪರೀಕ್ಷೆಯಲ್ಲಿ (ಟಿ.ಇ.ಟಿ) ಸುಧಾರಣೆ; ಅರುಣಾಚಲ ಪ್ರದೇಶದ ಪ್ರಾಥಮಿಕ ಶಾಲೆಗಳಿಗಾಗಿ ಕಲಿಕಾ ಸಾಮಗ್ರಿಗಳ ಅಭಿವೃದ್ಧಿ; ತಮಿಳುನಾಡಿನಲ್ಲಿ ಆರು ತಿಂಗಳುಗಳ ವೃತ್ತಿಪರ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಹಿರಿಯ ಶಿಕ್ಷಣಾಧಿಕಾರಿಗಳ ಸಾಮರ್ಥ್ಯ ಅಭಿವೃದ್ಧಿ; ದಾಖಲಾತಿ ದರ ಮತ್ತು ಬೋಧನಾ ಮತ್ತು ಕಲಿಕೆಯ ಗುಣಮಟ್ಟವನ್ನು ವೃದ್ಧಿಸುವುದಕ್ಕಾಗಿ ಕಾಶ್ಮೀರದ ಶ್ರೀನಗರ ಮಹಾನಗರ ಪಾಲಿಕೆಯ 83 ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರು, ಶಾಲಾ ಪ್ರಾಂಶುಪಾಲರು ಮತ್ತು ವಲಯ ನಾಯಕತ್ವದೊಂದಿಗೆ ಕೆಲಸ.

ಸರ್ಕಾರಿ ಅಧಿಕಾರಿಗಳು, ನಾವು ಯಾವ ತಂಡದೊಂದಿಗೆ ನಿರಂತರವಾಗಿ ಕೆಲಸ ಮಾಡುತ್ತೇವೆಯೋ ಆ ತಂಡದ ಪ್ರಮುಖ ಅಂಗವೆನಿಸುತ್ತಾರೆ. ಮೌಲ್ಯಾಂಕನ ಸುಧಾರಣೆಯ ಜೊತೆಗೆ ಹಿರಿಯ ಸರ್ಕಾರಿ ಅಧಿಕಾರಿಗಳ ಸಾಮರ್ಥ್ಯ ವೃದ್ಧಿಯು ನಮ್ಮ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದೆ. ಇದರಲ್ಲಿ ಮಂಡಳಿ ಪರೀಕ್ಷೆಗಳಲ್ಲಿ ಸುಧಾರಣೆ, ತರಗತಿ ಆಧರಿತ ಮೌಲ್ಯಾಂಕನ, ಸಮಾಜೋಭಾವನಾತ್ಮಕ ಕಲಿಕೆಯ ಮೌಲ್ಯಾಂಕನ ಮತ್ತು ಶಿಕ್ಷಕರ ಮೌಲ್ಯಾಂಕನ, ಶಿಕ್ಷಕರ ಅರ್ಹತೆ ಪರೀಕ್ಷೆ ಮತ್ತು ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಒಳಗೊಂಡಿದೆ.

© 2025 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
© 2025 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
This site is registered on wpml.org as a development site. Switch to a production site key to remove this banner.