ನಾಗರಿಕ ಸಮಾಜವನ್ನು ಬಲಪಡಿಸುವುದು

strengeningcivils

ನ್ಯಾಯಯುತ, ಸಮಾನ, ಮಾನವೀಯ ಹಾಗೂ ಸುಸ್ಥಿರ ಸಮಾಜದ ಫೌಂಡೇಶನ್ ನ ಮೂಲ ಮುಂಗಾಣ್ಕೆಯೊಂದಿಗೆ ಹೊಂದಿಕೊಂಡಿರುವ ನಾಗರಿಕ ಸಮಾಜದ ವ್ಯವಸ್ಥೆಯ ಮೇಲೆ ನಮಗೆ ನಂಬಿಕೆಯಿದೆ

ನಾಗರಿಕ ಸಮಾಜದ ಬಲವರ್ಧನೆಗೆ ಸಂಬಂಧಿಸಿದಂತೆ, ಈ ಕೆಳಕಂಡ ವಿಷಯಗಳಲ್ಲಿ ಕೆಲಸ ಮಾಡುವ 30ಕ್ಕೂ ಹೆಚ್ಚು ಸಂಸ್ಥೆಗಳಿಗೆ ಬೆಂಬಲ ನೀಡುತ್ತಿದ್ದೇವೆ: ಸಮುದಾಯಾಧಾರಿತ ಸಂಸ್ಥೆಗಳು, ಆರಂಭಿಕ-ಹಂತದ ಸಂಸ್ಥೆಗಳು ಹಾಗೂ ನಾಗರಿಕ ಸಮಾಜದ ಸಂಸ್ಥೆಗಳ ಸಾಮರ್ಥ್ಯವರ್ಧನೆ.

ವಿಶಾಲವಾದ ಪ್ರಜಾಸತ್ತಾತ್ಮಕ ಚೌಕಟ್ಟಿನಲ್ಲಿ ಸಾರ್ವಜನಿಕ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಸಮುದಾಯದೊಳಗಿಂದಲೇ ಸಹಜವಾಗಿ ಬೆಳೆದ ನಾಯಕತ್ವವನ್ನು ಅನುಕೂಲಿಸುವುದರ ಮೇಲೆ ನಮ್ಮ ಗಮನ ಕೇಂದ್ರೀಕೃತವಾಗಿದೆ.

ನಾಗರಿಕ ಸಮಾಜd ವ್ಯವಸ್ಥೆಯಲ್ಲಿ ಹೊಸ ಆಲೋಚನೆ, ಶಕ್ತಿ ಹಾಗೂ ಪಾತ್ರಧಾರರನ್ನು ಮುಂಚೂಣಿಗೆ ತರುವ ಆರಂಭಿಕ-ಹಂತದ ಸಂಸ್ಥೆಗಳೊಂದಿಗೆ ಕೆಲಸ ಮಾಡುವ ಪಾಲುದಾರರಿಗೂ ನಾವು ಸಮಾನ ಮಹತ್ವ ನೀಡುತ್ತೇವೆ.

ಚಿತ್ರ ಕೃಪೆ:- ಶಕ್ತಿ ಶಾಲಿನಿ, ದೆಹಲಿನ್

ನಾಯಕತ್ವ, ಆಡಳಿತ ಹಾಗೂ ಕೆಲವು ಮುಖ್ಯ ಪ್ರಕ್ರಿಯೆಗಳಾದ ಲೆಕ್ಕಪತ್ರ ಮತ್ತು ಹಣಕಾಸು, ಸಂವಹನೆ, ದತ್ತಾಂಶ/MIS ಮತ್ತು ಕಾನೂನು ಹಾಗೂ ಅನುಸರಣೆಗಳ ವಿಚಾರದಲ್ಲಿ ಇತರ ಸಂಸ್ಥೆಗಳ ಸಾಮರ್ಥ್ಯ ವರ್ಧನೆಯಲ್ಲಿ ತೊಡಗಿರುವ ಸಂಸ್ಥೆಗಳಿಗೂ ನಾವು ಬೆಂಬಲ ನೀಡುತ್ತೇವೆ.

ಪೌರತ್ವ ಹಕ್ಕುಗಳು ಮತ್ತು ಅರ್ಹತೆಗಳನ್ನು ಪಡೆಯಲು ಅಂಚಿನಲ್ಲಿರುವ ಸಮುದಾಯಗಳನ್ನು ಸಮರ್ಥಗೊಳಿಸುವುದು, ಗ್ರಹಿಕೆಗಳು ಮತ್ತು ಆಚರಣೆಗಳನ್ನು ಬದಲಾಯಿಸುವ ಮೂಲಕ ತಾರತಮ್ಯ, ಹಿಂಸಾಚಾರ ಮತ್ತು ಕಳಂಕವನ್ನು ಕಡಿಮೆ ಮಾಡುವುದು ಮತ್ತು ಸಣ್ಣ ಸಂಸ್ಥೆಗಳಿಗೆ ಸಾಮರ್ಥ್ಯವೃದ್ಧಿ ಮತ್ತು ಮಾರ್ಗದರ್ಶನದ ಬೆಂಬಲವನ್ನು ಒದಗಿಸಬಲ್ಲ ಸಂಸ್ಥೆಗಳನ್ನು ಬಲಪಡಿಸುವುದು – ಇವು ಈ ಕ್ಷೇತ್ರದಲ್ಲಿ ನಮ್ಮ ಕಾರ್ಯವಿಧಾನದ ಭಾಗವಾಗಿವೆ.

ನಮ್ಮ ಪಾಲುದಾರರ ವಿಸ್ತೃತ ಕೆಲಸಗಳಿಂದಾಗಿ ನಾವು ತಳಸ್ತರದಲ್ಲಿ ಧನಾತ್ಮಕ ಬದಲಾವಣೆಗಳನ್ನು ದಾಖಲಿಸಿದ್ದೇವೆ. ಸಮುದಾಯಾಧಾರಿತ ಸಂಸ್ಥೆಯ ವಿಷಯದ ಮೇಲೆ ತೊಡಗಿಸಿಕೊಂಡವರು ಹಲವಾರು ಉಪಕ್ರಮಗಳ ಮೂಲಕ 5.8 ಲಕ್ಷ ಜನರನ್ನು ತಲುಪಿದ್ದಾರೆ.

ನಾಗರಿಕ ಸಮಾಜ ಸಂಸ್ಥೆಗಳ ನಾಯಕರು ಧನಸಂಗ್ರಹದಲ್ಲಿ ಸಕ್ರಿಯರಾಗಿದ್ದಾರೆ, ಹಾಗೂ ಕೆಲವರು ಇತರ ದಾನಿಗಳಿಂದ ಅನುದಾನ ಪಡೆಯುವುದರಲ್ಲಿ ಯಶಸ್ವಿಯಾಗಿದ್ದಾರೆ. ಸಮುದಾಯಾಧಾರಿತ ಸಂಸ್ಥೆಗಳಲ್ಲಿ ಸದಸ್ಯತ್ವ ಹಾಗೂ ಸಂಗ್ರಹವಾದ ಸದಸ್ಯತ್ವ ಶುಲ್ಕದಲ್ಲಿ ಗಣನೀಯವಾಗಿ ಹೆಚ್ಚಿದೆ.

ಪಾಲುದಾರರ ಆಡಳಿತ ಮಂಡಳಿಗಳಲ್ಲಿ ಮಹಿಳೆಯರು ಮತ್ತು ಯುವಜನತೆಯ ಹೆಚ್ಚಿನ ಭಾಗವಹಿಸುವಿಕೆ ಸೇರಿದಂತೆ ಸರ್ವರನ್ನೊಳಗೊಂಡ ಮತ್ತು ವೈವಿಧ್ಯಮಯ ನಾಯಕತ್ವದ ಮೇಲೆ ಕೇಂದ್ರೀಕೃತ ಪ್ರಯತ್ನಗಳಾಗುತ್ತಿವೆ.

ಸಮಾಜ ಕಲ್ಯಾಣ ಯೋಜನೆಗಳಡಿ ಬರುವ ಹಕ್ಕುಗಳು ಮತ್ತು ಸವಲತ್ತುಗಳು ಜನರಿಗೆ ಸಿಗುವಂತೆ ಮಾಡಲು ಪ್ರಯತ್ನಿಸುತ್ತಿರುವ ಪಾಲುದಾರರ ಕೆಲಸವನ್ನು ಕ್ರೋಡೀಕರಿಸಿ, ವಿಸ್ತರಿಸುತ್ತಿದ್ದೇವೆ.

ನಾಗರಿಕ ಸಮಾಜ ಕ್ಷೇತ್ರದಲ್ಲಿ ನಾವು ನಮ್ಮ ಸಹವರ್ತಿಗಳೊಂದಿಗೆ ಕೆಲಸ ಮಾಡುತ್ತೇವೆ.

© 2025 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
© 2025 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
This site is registered on wpml.org as a development site. Switch to a production site key to remove this banner.