ನಗರ ಉಪಕ್ರಮಗಳು

Urbaninitiatives

ʼನಗರ ಉಪಕ್ರಮಗಳುʼ ಯೋಜನೆಯಲ್ಲಿ, ನಾವು ನಗರ ಪ್ರದೇಶದ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ಸಮುದಾಯಗಳೊಂದಿಗೆ ಕೆಲಸ ಮಾಡುತ್ತಿರುವ 150ಕ್ಕೂ ಹೆಚ್ಚು ಸಂಸ್ಥೆಗಳಿಗೆ ಬೆಂಬಲ ನೀಡುತ್ತೇವೆ

ಈ ಸಮುದಾಯಗಳಲ್ಲಿ ವಲಸೆ ಮತ್ತು ಅನೌಪಚಾರಿಕ ವಲಯದ ಕಾರ್ಮಿಕರು, ನಿರಾಶ್ರಿತರು, ಅನೌಪಚಾರಿಕ ವಸತಿಗಳಲ್ಲಿ ವಾಸಿಸುವವರು, ಬಡ ವೃದ್ಧರು, ಕೈಯ್ಯಿಂದ ಮಲ ಹೊರುವ ಮತ್ತು ಕಸ ಹೆಕ್ಕುವ ಕಾರ್ಮಿಕರು ಇದ್ದಾರೆ.

ನಮ್ಮ ಸಹವರ್ತಿಗಳು, ವಲಸೆ ಮತ್ತು ಅನೌಪಚಾರಿಕ ವಲಯದ ಕಾರ್ಮಿಕರ ಹಕ್ಕುಗಳಿಗೆ ಬೆಂಬಲ ನೀಡುವುದು, ನಿರಾಶ್ರಿತರು ಮತ್ತು ಮನೆಯವರಿಂದ ತೊರೆಯಲ್ಪಟ್ಟ ಹಿರಿಯರಿಗೆ ನೆರವು ನೀಡುವುದು – ಇವೇ ಮೊದಲಾದ, ಅಂಚಿಗೆ ತಳ್ಳಲ್ಪಟ್ಟ ನಗರವಾಸಿಗಳ ಬದುಕಿನ ಮೇಲೆ ಪರಿಣಾಮ ಬೀರುವಂತಹ, ಹಲವು ಅಂಶಗಳ ಮೇಲೆ ಗಮನ ಹರಿಸುತ್ತಾರೆ.

UrbanInitiatives

ವಲಸೆ ಮತ್ತು ಅನೌಪಚಾರಿಕ ವಲಯದ ಕಾರ್ಮಿಕರ ಜೊತೆಗಿನ ಅವರ ಕೆಲಸಗಳ ಪರಿಣಾಮವಾಗಿ ಆ ಕಾರ್ಮಿಕರು ಇನ್ನೂ ಉತ್ತಮವಾದ ಕೆಲಸದ ಪರಿಸರವನ್ನು ಪಡೆಯಲು ಮತ್ತು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಹೆಚ್ಚಿನ ಶಕ್ತಿಯನ್ನು ಒದಗಿಸುವ ಸಾಮೂಹಿಕ ಸಂಘ ಸಂಸ್ಥೆಗಳು ರೂಪುಗೊಂಡಿವೆ, ಮತ್ತು ಅಂತಹ ಸಂಘ ಸಂಸ್ಥೆಗಳ ಸಾಮರ್ಥ್ಯ ವರ್ಧನೆಯೂ ಆಗಿದೆ. ಇಂತಹ ಕಾರ್ಮಿಕರು ಮತ್ತು ನಗರ ನೈರ್ಮಲ್ಯ ಕಾರ್ಮಿಕರ ವೃತ್ತಿ ಸಂಬಂಧಿತ ಭದ್ರತಾ ಕ್ರಮಗಳು ಉತ್ತಮವಾಗಿವೆಯಲ್ಲದೇ, ಕೆಲಸದ ಸಮಯದಲ್ಲಿ ಆಗಬಹುದಾದ ಅವಘಡ ಅಥವಾ ಸಾವಿನ ಸಂದರ್ಭದಲ್ಲಿ ಸಿಗುವ ಪರಿಹಾರವನ್ನು ಕೂಡ ಹೆಚ್ಚಿಸಲಾಗಿದೆ.

ಅನೌಪಚಾರಿಕ ವಸತಿಗಳಲ್ಲಿ ನಮ್ಮ ಸಹ-ಸಂಸ್ಥೆಗಳ ಉಪಕ್ರಮಗಳು ಅಲ್ಲಿನ ಜನರಿಗೆ ನ್ಯಾಯಯುತವಾಗಿ ಸಿಗಬೇಕಾದಂತಹ ಸಾಮಾಜಿಕ ಭದ್ರತಾ ಸೌಲಭ್ಯಗಳಾದ ಪಿಂಚಣಿ, ಸ್ಕಾಲರ್‌ಶಿಪ್‌ ಮತ್ತು ಪಡಿತರಗಳು ಸುಲಭವಾಗಿ ಸಿಗುವಂತೆ ಮಾಡಿವೆ. ಗಳಿಗೆ ಅದರ ಜೊತೆಗೆ, ನೀರು, ಸುಸಜ್ಜಿತ ರಸ್ತೆಗಳು, ನೈರ್ಮಲ್ಯೀಕರಣ, ವಿದ್ಯುತ್, ಕಸ ವಿಲೇವಾರಿ, ಆರೋಗ್ಯ ಸೌಲಭ್ಯಗಳು ದೊರಕುವಂತೆ ಆಗಿರುವುದರಿಂದ, ಅಲ್ಲಿಯ ಜನರ ಬದುಕುವ ಸ್ಥಿತಿಯೂ ಗಣನೀಯವಾಗಿ ಸುಧಾರಿಸಿದೆ.

ನಮ್ಮ ಸಹವರ್ತಿಗಳು ವಯೋವೃದ್ಧರ ದೈಹಿಕ, ಭಾವನಾತ್ಮಕ, ಮಾನಸಿಕ ಯೋಗಕ್ಷೇಮಕ್ಕಾಗಿ ಬಹಳ ಶ್ರಮಿಸುತ್ತಾರೆ. ಜೊತೆಗೆ ರೋಗಿಗಳ ಜೀವನದ ಗುಣಮಟ್ಟವನ್ನು ಸುಧಾರಿಸುವಂತಹ ಸೇವೆಗಳು, ಡಿಮೆನ್ಶಿಯಾ ಆರೈಕೆ ಮತ್ತು ಸಾಮಾನ್ಯ ಆರೋಗ್ಯ ಸೇವೆಗಳು ಹೆಚ್ಚು ಸುಲಭವಾಗಿ ಸಿಗುವಂತೆ ಮಾಡಲು ಪ್ರಯತ್ನಿಸುತ್ತಿದಾರೆ.

ನಮ್ಮ ನಗರಗಳಲ್ಲಿರುವ ವಸತಿಹೀನರಿಗೆ ಸೂಕ್ತ ಆರೈಕೆ ಒದಗಿಸುವ, ಪುನರ್‌ವಸತಿ ಕಲ್ಪಿಸುವ ಮತ್ತು ಅವರನ್ನು ಪುನಃ ಅವರ ಮನೆಯವರೊಂದಿಗೆ ಒಂದಾಗಿಸುವ ಶೆಲ್ಟರ್ ಆಧಾರಿತ/ಸಾಂಸ್ಥಿಕ ಅಥವಾ ಸಾಮುದಾಯಿಕ ಸೇವೆಗಳನ್ನು ಒದಗಿಸುವವರಿಗೆ ಬೆಂಬಲ ನೀಡುತ್ತೇವೆ.

ನಮ್ಮ ಸಹವರ್ತಿಗಳು ನಗರಾಡಳಿತದ ಪ್ರಕ್ರಿಯೆಯಲ್ಲಿ ಸಮುದಾಯಗಳ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುನ ನಿಟ್ಟಿನಲ್ಲಿಯೂ ಕೆಲಸ ಮಾಡುತ್ತಾರೆ.

ಪ್ರಮುಖ ನಗರಗಳಲ್ಲಿ ಇರುವ ವಲಸೆ ಮತ್ತು ಅನೌಪಚಾರಿಕ ವಲಯದ ಕಾರ್ಮಿಕರಿಗೆ ಮಧ್ಯಸ್ಥಿಕೆಯ ವಹಿಸುವುದು ಮತ್ತು ಕಾನೂನಿನ ನೆರವು ನೀಡುವುದು, ಹಾಗೂ ಬೆಂಗಳೂರು ಮತ್ತು ಚೆನ್ನೈನ ವಸತಿಹೀನ ಜನತೆಯ ನೆರವಿಗೆ ಸಮಗ್ರ ಯೋಜನೆಗಳನ್ನು ಹಮ್ಮಿಕೊಳ್ಳುವುದು – ಇವು ಸಹಯೋಗದಲ್ಲಿ ನಡೆಯುತ್ತಿರುವ ಕೆಲವು ನಗರ ಉಪಕ್ರಮಗಳಾಗಿವೆ. ಬೆಂಗಳೂರಿನಲ್ಲಿ ಅನೌಪಚಾರಿಕ ವಸತಿಗಳಲ್ಲಿ ವಾಸಿಸುವ ಜನರ ಬದುಕಿನ ಮಟ್ಟವನ್ನು ಒಂದು ಪ್ರತ್ಯೇಕ ಯೋಜನೆಯೊಂದರ ಮೂಲಕ ಪ್ರಯತ್ನಿಸುತ್ತಿದ್ದೇವೆ.

ನಗರ ಉಪಕ್ರಮದಲ್ಲಿ, ನಾವು ನಮ್ಮ ಸಹವರ್ತಿಗಳೊಂದಿಗೆ ಕೆಲಸ ಮಾಡುತ್ತೇವೆ.

© 2025 अजीम प्रेमजी फाउंडेशन. सर्वाधिकार सुरक्षित।
© 2025 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
This site is registered on wpml.org as a development site. Switch to a production site key to remove this banner.